ಪ್ರಿಯಕರನಿಗಾಗಿ ಹೆತ್ತ ಮಗಳನ್ನೇ ಕೊಂದ ತಾಯಿ : ಸೂಟ್‌ ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ.

ಈ ಜಗತ್ತಿನಲ್ಲಿ ತಂದೆ ಕೆಟ್ಟವನು ಇರಬಹುದು ಆದರೆ ಇಲ್ಲಿ ಒಬ್ಬ ತಾಯಿ ಕೂಡ ಕೆಟ್ಟವಳು ಆಗಿದ್ದಾಳೆ. ಅವಳು ಮಾಡಿದ ಕೆಲಸಕ್ಕೆ ಸಮಾಜ ತಲೆ ತಗ್ಗಿಸುವಂತೆ ಆಗಿದೆ.

ತಾಯಿಯಾದವಳು ಮಕ್ಕಳನ್ನು ರಕ್ಷಿಸಿ ಬೆಳಸಬೇಕು ಆದರೆ ಇಲ್ಲಿ ಮಾನವೀಯತೆಯನ್ನು ಮರೆತ ಒಬ್ಬಳು ತಾಯಿ ತನ್ನ 3 ವರ್ಷದ ಮಗುವನ್ನು ಕತ್ತು ಕೊಯ್ದು ಕೊಲೆ ಮಾಡಿ ಸೂಟ್‌ ಕೇಸ್‌ ನಲ್ಲಿ ಕಟ್ಟಿ ಬಿಸಾಡಿದ್ದಾಳೆ. 

ಕೊಲೆ ಮಾಡಲು ಕಾರಣವೇನು

 ಇದಕ್ಕೆ ಕಾರಣ ತನ್ನ ಪ್ರಿಯಕರನ ಜೊತೆ ಓಡಿ ಹೋಗಲು ಮಗು ಅಡ್ಡಿಯಾಗಿದೆ ಎಂದು ಮಗುವನ್ನು ಕೊಂದಿದ್ದಾಳೆ. ಈ ಘಟನೆ ಬೆಳಕಿಗೆ ಬಂದಿರೋದು ಬಿಹಾರದ ಮುಜಾಪರ್ ಪುರದಲ್ಲಿ. ಪೊಲೀಸರಿಗೆ ಸಿಕ್ಕ ಸೂಟ್ಕೇಸ್ ಅಲ್ಲಿ 3 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು ಪೊಲೀಸ್ ತನಿಖೆಯ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಒಬ್ಬರ ಜೊತೆ ಮದುವೆಯಾಗಿದ್ದರು ಕೂಡ ಬೇರೆಯವನ ಜೊತೆ ಸಂಬಂಧ ಹೊಂದಿದ್ದ ಕಾಜಲ್ ಎಂಬಾಕೆ ತನ್ನ ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಹೋಗಬೇಕು ಎಂದು ನಿರ್ಧರಿಸಿದಳು. ಆದರೆ ಅದಕ್ಕೆ ತನ್ನ 3 ವರ್ಷದ ಮಗು ಅಡ್ಡಿಯಾಗಿದ್ದಳು. ಅದಕ್ಕೆ ತನ್ನ ಮಗುವನ್ನು ಕೊಂದು ಸೂಟ್ಕೇಸ್ ಅಲ್ಲಿ ಹಾಕಿ ಬಿಸಾಡಿದೆ ಎಂದು ತನ್ನ ತಪ್ಪನ್ನು ಪೋಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.

ಪೋಲಿಸರ ಶೋಧ ಕಾರ್ಯ

ಮಗುವಿನ ಕತ್ತು ಕೊಯ್ದು ಕೊಲೆ ಮಾಡಿ, ಶವವನ್ನು ಸೂಟ್ ಕೇಸ್‌ ನಲ್ಲಿ ಹಾಕಿ ತನ್ನ ಬಾಡಿಗೆ ಮನೆ ಸಮೀಪದ ಪೊದೆಯಲ್ಲಿ ಅಗಸ್ಟ್‌ 23 ರಂದು ಎಸೆದಿದ್ದಳು. ಜನಪ್ರಿಯ ಟಿವಿ ಶೋ ” ಕ್ರೈಮ್‌ ಪ್ಯಾಟ್ರೋಲ್‌ ” ನೋಡಿ ಮಗಳನ್ನು ಕೊಲ್ಲಲು ಪ್ಲಾನ್‌ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ.

ಕೆಂಪು ಟ್ರಾಲಿ ಸೂಟ್‌ ಕೇಸ್‌ ನಲ್ಲಿ ಮಿಸ್ತಿ ಎನ್ನುವ ಬಾಲಕಿಯ ಶವ ಪತ್ತೆಯಾದಾಗ ಪೋಲಿಸರು ವಿಶೇಷ ತಂಡವನ್ನು ರಚಿಸಿ, ಬಾಲಕಿಯ ಮನೆಯನ್ನು ಶೋಧಿಸಿದಾಗ ನೆಲ, ಸಿಂಕ್‌ ಮತ್ತು ಟೇರೆಸ್‌ ಮೇಲೆ ರಕ್ತದ ಕುರುಹುಗಳು ಪತ್ತೆಯಾದವು.

ಘಟನೆಯ ದಿನ ಪತಿ ಮನೋಜ್ ಗೆ ಕರೆ ಮಾಡಿ ತನ್ನ ತಾಯಿಯ ಮನೆಗೆ ಹೋಗುವುದಾಗಿ ತಿಳಿಸಿದ ಆಕೆ ಮತ್ತೆ ಮನೆಗೆ ಬರಲೇ ಇಲ್ಲ. ಪತ್ನಿ ವಾಪಾಸ್ ಬರದೇ ಇರುವುದನ್ನು ಕಂಡು ಮನೋಜ್ ತನ್ನ ಪತ್ನಿಯ ಮೇಲೆ ಪೊಲೀಸರಿಗೆ ದೂರು ದಾಖಲಿಸಿದನು. ಪೊಲೀಸರು ಕಾಜಲ್ ಫೋನ್ ಟ್ರ್ಯಾಕ್ ಮಾಡಿದಾಗ ಕಾಜಲ್ ತನ್ನ ಪ್ರಿಯಕರನ ಮನೆಯಲ್ಲಿ ಇರುವುದು ಪತ್ತೆಯಾಯಿತು.

ತನಿಖೆ ವೇಳೆ ಕಾಜಲ್ ವಿವಾಹಿತರ ಸಂಬಂಧ ಹೊಂದಿದ್ದಾಳೆ ಎಂದು ಗೊತ್ತಾಯಿತು. ತದನಂತರ ಆಕೆಯನ್ನು ಬಂಧಿಸಿ ವಿಚಾರಣೆ ನಡಿಸಿದಾಗ ಪ್ರಿಯಕರನ ಜೊತೆ ಇರಲು ಮಗುವನ್ನು ದೂರ ಮಾಡಿಕೊಂಡೆ ಎಂದು ಹೇಳಿದ್ದಾಳೆ. ಮಗಳನ್ನು ಜೊತೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದೆ ಆದರೆ ಪ್ರಿಯಕರ ಒಪ್ಪದಿದ್ದ ಕಾರಣ ಮಗುವನ್ನು ಕೊಂದೆ ಎಂದು ತಿಳಿಸಿದ್ದಾಳೆ.

Scroll to Top