ಯಾವುದೇ ರೀತಿ ಲೈಂಗಿಕ ಕ್ರಿಯೆ ನಡೆಸದೇ ಸಂತಾನೋತ್ಪತಿ ಮಾಡುತ್ತವೆ ಈ ಪ್ರಾಣಿಗಳು

“ಪ್ರಾಣಿಗಳ ಜಗತ್ತು ನಿಜವಾಗಿಯೂ ಅದ್ಭುತವಾಗಿದ್ದು, ನಮ್ಮನ್ನು ನಿರಂತರವಾಗಿ ಆಶ್ಚರ್ಯಚಕಿತಕ್ಕೆ ತಳ್ಳುತ್ತದೆ. ಕೆಲವೊಂದು ಪ್ರಾಣಿಗಳು ಗಂಡು-ಹೆಣ್ಣು ನಡುವಿನ ಸಂಪರ್ಕವಿಲ್ಲದೆ ಸಂತಾನೋತ್ಪತ್ತಿ ಮಾಡುತ್ತವೆ ಎಂದು ನೀವು ತಿಳಿದಿರಾ? ಈ ವಿಶೇಷ ಘಟನೆಯನ್ನು ‘ಪಾರ್ಥೆನೋಜೆನೆಸಿಸ್’ ಎಂದು ಕರೆಯುತ್ತಾರೆ.”

“ಈ ವಿಧಾನದಲ್ಲಿ, ಹೆಣ್ಣು ಪ್ರಾಣಿ ತನ್ನ ಫಲವತ್ತಾಗದ ಮೊಟ್ಟೆಯ ಮೂಲಕ ನೇರವಾಗಿ ಭ್ರೂಣವನ್ನು ರೂಪಿಸುತ್ತವೆ. ಇದರ ಪರಿಣಾಮವಾಗಿ, ಎಲ್ಲಾ ಗಂಡು ಅಥವಾ ಎಲ್ಲಾ ಹೆಣ್ಣು ಸಂತಾನಗಳ ಪುನರಾವೃತ್ತಿಯಾಗುತ್ತದೆ. ಕೆಲವು ಪ್ರಾಣಿಗಳಲ್ಲಿ, ಈ ಪಥವು ಸಂತಾನೋತ್ಪತ್ತಿಯ ಏಕೈಕ ಮಾರ್ಗವಾಗಿರುವಾಗ, ಈ ಘಟನೆಯನ್ನು ‘ ಪಾರ್ಥೆನೋಜೆನೆಸಿಸ್’ ಎಂದು ಹೆಸರಿಸಲಾಗುತ್ತದೆ. ಇವು ಗಂಡು-ಹೆಣ್ಣು ಸಂಪರ್ಕವಿಲ್ಲದೆ ಸಂತಾನೋತ್ಪತ್ತಿ ಮಾಡುವ ಕೆಲವು ಪ್ರಾಣಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.”

1. ಕೋಮೊಡೋ ಡ್ರಾಗನ್‌

2006ರಲ್ಲಿ, ವಿಜ್ಞಾನಿಗಳು ವಿಶ್ವದ ಅತ್ಯಂತ ಪ್ರಾಣಾಂತಕ ಪ್ರಾಣಿಗಳಲ್ಲಿ ಒಂದಾದ ಕೋಮೊಡೋ ಡ್ರಾಗನ್‌ಗಳು ಗಂಡುಗಳಿಲ್ಲದೆ ಪುನರುತ್ಪತ್ತಿ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. . ಆ ಸಮಯದಲ್ಲಿ, ಯು.ಕೆ.ಯ ಚೆಸ್ಟರ್‌ ಜೂದಲ್ಲಿ ಇರುವ ಹೆಣ್ಣು ಕೋಮೊಡೋ ಡ್ರಾಗನ್ ಗಂಡುಗಳನ್ನು ಸಂಪರ್ಕಿಸದೆ 25 ಮೊಟ್ಟೆಗಳನ್ನು ಇಟ್ಟಿತ್ತು. ಇದು ಆ ಸಮಯದಲ್ಲಿ ಒಂದು ಅಸಾಧಾರಣವಾದ ವಿಷಯವಾಗಿ ಪರಿಗಣಿಸಲಾಯಿತು.

2. ಕ್ಯಾಲಿಪೋರ್ನಿಯಾ ಕಾಂಡೋಸ್‌

ಕ್ಯಾಲಿಪೋರ್ನಿಕಾ ಕಾಂಡೋಸ್‌ ಎಂದು ಕರೆಯಲ್ಪಡುವ ರಣಹದ್ದುಗಳು ಉತ್ತರ ಅಮೇರಿಕಾದಲ್ಲಿರುವ ಅತ್ಯಂತ ದೊಡ್ಡ ಪಕ್ಷಿಗಳಾಗಿದ್ದು ಇವುಗಳು ಕೂಡ ಯಾವುದೇ ರೀತಿಯ ಲೈಂಗಿಕ ಕ್ರಿಯೆ ನಡೆಸದೇ ತಮ್ಮ ಮರಿಗಳಿಗೆ ಜನ್ಮ ನೀಡುತ್ತದೆ. ವಂಶವಾಹಿಯ ಪರೀಕ್ಷೆಯಲ್ಲಿ ಇದು ಸಾಬಿತಾಗಿದೆ.ಮತ್ತು ಅವುಗಳಿಗೆ ಹುಟ್ಟಿದ ಮರಿಗಳನ್ನು ಪರೀಕ್ಷೆ ಮಾಡಿದಾಗ ತಾಯಿ ವಂಶವಾಹಿ ಮಾತ್ರ ಇತ್ತು.

3. ಸ್ಟೀಕ್‌ ಇನ್ಸೆಕ್ಟ್‌ ಅಥವಾ ಮಿಡತೆ

ಸ್ಠೀಕ್‌ ಇನ್ಸೆಕ್ಟ್‌ ಅಥವಾ ಕಡ್ಡಿ ಕೀಟ ಅಥವಾ ಮಿಡತೆ ಎಂದು ಕರೆಯಲ್ಪಡುವ ಈ ಕೀಟವು ಕೂಡ ಗಂಡಿನ ಸಂರ್ಪಕವಿಲ್ಲದೆ ತನ್ನ ಮರಿಗಳಿಗೆ ಜನ್ಮ ನೀಡುತ್ತದೆ. ಒಂದೊಂದು ಕಡೆ ಪ್ರದೇಶಗಳಿಗೆ ತಕ್ಕಂತೆ ಜನ ಇದನ್ನು ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಲೈಂಗಿಕ ಕ್ರಿಯೆ ನಡೆಸದೆ ಮರಿಗಳಿಗೆ ಜನ್ಮ ನೀಡುವುದು ಇವುಗಳಿಗೆ ಸಾಮಾನ್ಯವಾಗಿದೆ.

‌4. ಬೊನೆಹ್ವೆಡ್ ಶಾರ್ಕ್

ಸಮುದ್ರದಾಳದಲ್ಲಿರುವ ಶಾರ್ಕಕೂಡ ಪಾರ್ಥೆನೋಜೆನೆಸಿಸ್‌ ಪ್ರಕ್ರಿಯೆ ಮೂಲಕ ತನ್ನ ಸಂತಾನವನ್ನು ಬೆಳೆಸುತ್ತದೆ. ಬೊನೆಹ್ವೆಡ್‌ ಶಾರ್ಕ್‌ ಎಂದು ಕರೆಯಲ್ಪಡುವ ಈ ಶಾರ್ಕ್‌ವೊಂದು ಒಮಹಾದ ಹೆನ್ರಿ ಡೂರ್ಲಿ ಝುನ ಅಕ್ವೇರಿಯಂನಲ್ಲಿತ್ತು. ಇದು ಗಂಡಿನ ಸಂರ್ಪಕವಿಲ್ಲದೆ ಮರಿಯೊಂದಕ್ಕೆ ಜನ್ಮ ನೀಡಿತ್ತು.‌

5. ಕುರುಡು ಹಾವು

ಕುರುಡು ಹಾವು ( brahminy blind snack ) ಎಂದು ಕರೆಯಲ್ಪಡುವ ಈ ಸರೀಸೃಪವೂ ಕೂಡ ಗಂಡಿನ ಸಂರ್ಪಕವಿಲ್ಲದೆ ಸಂತಾನೋತ್ಪತಿ ಮಾಡುವಲ್ಲಿ ಯಶಸ್ವಿಯಾಗಿದೆ.

6.ಮೊಲ್ಲಿ ಫಿಶ್ ಗಳು

ಮೊಲ್ಲಿ ಫಿಶ್‌ ಗಳು ವೀರ್ಯವನ್ನು ಅವಲಂಬಿತವಾಗಿರುವ ಪಾರ್ಥೆನೋಜಿಸಿಸ್ ಗಳು ಎಂದು ಕರೆಯುತ್ತಾರೆ. ಈ ಎಲ್ಲಾ ಹೆಣ್ಣು ಮೀನುಗಳು ಮೊಟ್ಟೆ ರಚನೆಯನ್ನು ಪ್ರಚೋದಿಸಲು ಸಂಬಂಧಿತ ಜಾತಿಯ ಗಂಡಿನ ವೀರ್ಯವನ್ನು ಬಳಸುತ್ತದೆ. ಆದರೂ ವೀರ್ಯವು ಅನುವಂಶಿಕ ಮೊಟ್ಟೆಗೆ ಯಾವುದೇ ರೀತಿಯ ಕೊಡುಗೆ ನೀಡುವುದಿಲ್ಲ.

7. ಮೊಸಳೆಗಳು

ಮೊಸಳೆಗಳು ಕೂಡ ಗಂಡಿನ ಸಂರ್ಪಕವಿಲ್ಲದೇ ಸಂತಾನೋತ್ಪತಿ ಮಾಡುತ್ತದೆ. ಇವುಗಳು ಫಲವತ್ತತೆ ಹೊಂದಿರದ ಮೊಟ್ಟೆಗಳಿಂದ ಭ್ರೂಣವೊಂದನ್ನು ಸೃಷ್ಠಿಸಿ ಅದರಿಂದಲೇ ಗಂಡಿನ ಸಹಾಯವಿಲ್ಲದೇ ಮರಿಗಳನ್ನು ಪಡೆಯುತ್ತದೆ.

8. ಟಾರ್ಡಿಗ್ರೇಡ್ಸ್‌

ಟಾರ್ಡಿಗ್ರೇಡ್ಸ್‌ ಎಂದು ಕರೆಯಲ್ಪಡುವ ಈ ಕೀಟ ಮಾತ್ರ ಎರಡು ರೀತಿಯಲ್ಲಿ ಸಂತಾನೋತ್ಪತ್ತಿಯನ್ನು ನಡೆಸುತ್ತದೆ. ಇವು ನೀರಿನಲ್ಲಿ ವಾಸ ಮಾಡುವ ಸೂಕ್ಷ್ಮ ಜೀವಿಗಳಾಗಿವೆ. ಆದರೂ ಕೂಡ ಗಂಡಿನ ಸಂರ್ಪಕವಿಲ್ಲದೆ ಸಂತಾನೋತ್ಪತ್ತಿ ಮಾಡುವುದು ಸಾಮಾನ್ಯವಾಗಿದೆ.

Scroll to Top