ಕನ್ನಡತಿ ರಂಜನಿ ರಾಘವನ್‌ ತಮ್ಮ ಜೀವನ ಸಂಗಾತಿಯನ್ನು ಪರಿಚಯಿಸಿದ್ದಾರೆ. ಯಾರು ಈ ಹುಡುಗ ?

ರಂಜನಿ ರಾಘವನ್‌ ಅವರ ಜೀವನ ಸಂಗಾತಿಯಾಗುತ್ತಿರುವ ಹುಡುಗನ ಹೆಸರು ಸಾಗರ್‌ ಭಾರಧ್ವಜ್.‌ ಅವರು ವೃತಿಯಲ್ಲಿ ಅಥ್ಲೇಟ್‌ ಎನ್ನಲಾಗಿದೆ. ಶೋಶಿಯಲ್‌ ಮಿಡಿಯಾ ಖಾತೆಯನ್ನು ಪ್ರೆವೇಟ್‌ ಆಗಿ ಇಟ್ಟಿದ್ದಾರೆ. ಭಾರದ್ವಾಜ್‌ ಅವರು ರನ್ನರ್‌, ಸೈಕಲಿಸ್ಟ್‌, ಬೈಕರ್‌ ಕೂಡ ಹೌದು. ಆದರೆ ರಂಜನಿ ಅವರು ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡಿಲ್ಲ.

image credit to Ranjaniraghvan Official account

ರಂಜನಿ ತಮ್ಮ ವೃತಿ ಜೀವನವನ್ನು ಆಕಾಶದೀಪ ಎಂಬ ಧಾರಾವಾಹಿಯ ಮೂಲಕ ಪ್ರಾರಂಬಿಸಿದರು. ನಂತರ “ಪುಟ್ಟ ಗೌರಿ ʼ ಧಾರಾವಾಹಿಯ ಡೊಡ್ಡ ಖ್ಯಾತಿಯನ್ನು ಮತ್ತು ಯಶಸ್ಸನ್ನು ಗಳಿಸಿದರು. ನಂತರ “ಕನ್ನಡತಿ ” ಧಾರವಾಹಿಯ ಮೂಲಕ ಎಲ್ಲಾ ಪಡ್ಡೆ ಹುಡುಗರ ಗಮನ ಸೆಳೆದರು.

ರಂಜನಿ ಅವರ ಮೊದಲ ಚಿತ್ರ ರಾಜಹಂಸ, ಟಕ್ಕರ್‌, ಸತ್ಯಂ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಹಾಕೋಣ ಬಾ ತಾಳ ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಂಗರೂ ಸಿನಿಮಾ ಇತ್ತೀಚೆಗೆ ರಿಲೀಸ್‌ ಆಗಿದೆ.

ಸ್ವತ: ಅವರೇ ತಮ್ಮ ಸಂಗತಿಯ ಪೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಇವುಗಳನ್ನು ಖಾಸಗಿಯಾಗಿ ಇಡಲು ಬಯಸುತ್ತಾರೆ. ಈ ಪೋಟೋಗಳಿಗೆ ಫಾನ್ಸ್‌ ನಾನಾ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಇನ್ನು ಕೆಲವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ವರದಿ ಅಭಿಮಾನಿಗಳಿಗೆ ದೊಡ್ಡ ಆಶ್ಚರ್ಯವನ್ನುಂಟುಮಾಡಿದೆ, ಏಕೆಂದರೆ ರಂಜನಿ ಸಾಮಾನ್ಯವಾಗಿ ತಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸುವವರಲ್ಲ. ಅವರ ನಿಶ್ಚಿತಾರ್ಥ ಮತ್ತು ಮದುವೆಯ ದಿನಾಂಕ ಇನ್ನೂ ಪ್ರಕಟವಾಗಿಲ್ಲ, ಆದರೆ ಈ ಘೋಷಣೆಯು ಅವರ ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲವನ್ನು ಮೂಡಿಸಿದೆ​

ವ್ಯೆಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಮಾತನಾಡಿಲ್ಲ ಅವರು ಇವುಗಳನ್ನು ಖಾಸಗಿಯಾಗಿ ಇಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಮ್ಮ ಜೀವನ ಸಂಗಾತಿ ಬಗ್ಗೆ ಮಾಹಿತಿ ನೀಡಿದ್ದಾರೆ.

Scroll to Top