14 ತಿಂಗಳು ಕಿಡ್ನಾಪರ್‌ ಜೊತೆಗೆ ಇದ್ದ ಮಗು. ಕೊನೆಯಲ್ಲಿ ಆಗಿದ್ದೇ ಬೇರೆ.

ಮಕ್ಕಳ ಮನಸ್ಸು ಎಷ್ಟು ಮುಗ್ಥತೆಯಿಂದ ಕೂಡಿರುತ್ತೆ ಅನ್ನೊದು ಆಗಾಗ ಕೆಲವು ಘಟನೆಗಳ ಮೂಲಕ ಸಮಾಜದ ಎದುರು ಬಹಿರಂಗವಾಗುವುದನ್ನು ನೋಡಿದ್ದೇವೆ. ಮಕ್ಕಳಿದ್ದರೆ ಮನಸ್ಸಿಗೆ ನೆಮ್ಮದಿ ಅನ್ನೋ ಮಾತನ್ನು ಹಿರಿಯರು ಸುಮ್ಮನೆ ಹೇಳಿಲ್ಲ ಅಲ್ವಾ , ಹಾಗೇ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆ ಅನ್ನೋದು ಸಹ ಮುಖ್ಯವಾಗಿರುತ್ತದೆ.

ಈ ಘಟನೆಯನ್ನು ಹೃದಯ ವಿದ್ರಾವಕ ಮತ್ತು ನಿರ್ದಯ ವಾಸ್ತವವನ್ನು ತೋರಿಸುತ್ತದೆ. ಇದು ಜೈಪುರದಲ್ಲಿ 14 ತಿಂಗಳ ಹಿಂದೆ ಸಂಭವಿಸಿದ ಮಗುವಿನ ಅಪಹರಣದ ಕುರಿತಾದ ಘಟನೆ. ಬಾಲಿವುಡ್ ಚಿತ್ರದಲ್ಲಿ ನಾವು ಕಾಣುವಂಥವು, ಆದರೆ ಇದೊಂದು ನಿಜವಾದ ಘಟನೆ.

ಜೈಪುರ ಪೊಲೀಸರು ಈ ಪ್ರಕರಣವನ್ನು 14 ತಿಂಗಳ ನಂತರ ಬಿಚ್ಚಿಟ್ಟರು. ಮಗುವನ್ನು ಪತ್ತೆ ಮಾಡಿದಾಗ, ಅದನ್ನು ತನ್ನ ತಾಯಿಗೆ ಹಿಂತಿರುಗಿಸಲು ಪ್ರಯತ್ನಿಸುತ್ತಿದ್ದರು. ಆದರೆ ಆ ಮಗುವು ತನ್ನ ಅಪಹರಣಕಾರನಿಗೆ ಬಿಗಿಯಾಗಿ ಅಂಟಿಕೊಂಡಿತ್ತು. ಆ ವ್ಯಕ್ತಿಯು, ತನ್ನ ತಾಯಿಯಂತೆ, ಅವನಿಗೆ ಪರಿಚಯವಾಗಿದ್ದಾನೆ.

ಕಿಡ್ನಾಪರ್‌ ಯಾರು ?

ಜೈಪುರದ ಸಂಗನೇರ್ ಸದರ್‌ ಪೋಲೀಸ್‌ ಠಾಣೆ ವ್ಯಾಪ್ತಿಯಲ್ಲಿ ೧೪ ತಿಂಗಳ ಹಿಂದೆ ನಡೆದಿದ್ದ ಪೃಥ್ವಿ ಎಂಬ ೨ ವರ್ಷದ ಮಗುವಿನ ಅಪಹರಣ ಪ್ರಕರಣವನ್ನು ಪೋಲಿಸರು ಬುಧವಾರ ಭೇಧಿಸಿದ್ದಾರೆ. ಅಚ್ಚರಿ ಎಂದರೆ ಇಲ್ಲಿ ಪೊಲೀಸ್‌ ಕಾನ್ಸ್ ಟೇಬಲ್‌ ಒಬ್ಬ ಮಗುವನ್ನು ಕಿಡ್ನಾಪ್‌ ಮಾಡಿದ್ದ. ಆತನ ಹುಡುಕಿ ಕೊಟ್ಟವರಿಗೆ ಅಥವಾ ಸುಳಿವು ನೀಡಿದವರಿಗೆ ೨೫ ಸಾವಿರ ರೂ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.

ಪೊಲೀಸರು ಮಗುವನ್ನು ಬಲವಂತವಾಗಿ ಬೇರ್ಪಡಿಸಲು ಮುಂದಾದಾಗ, ಮಗು ಭಯದಿಂದ ಅಳಲು ಪ್ರಾರಂಭಿಸಿತು. ಈ ದೃಶ್ಯದಲ್ಲಿ, ಮುಗ್ಧ ಮಗು ತನ್ನ ಅಪಹರಣಕಾರನಿಗೆ ಎಷ್ಟು ಪ್ರೀತಿ ಮತ್ತು ನಂಬಿಕೆಯನ್ನು ಹೊಂದಿದೆಯೆಂದು ತೋರಿಸುತ್ತದೆ, ಏಕೆಂದರೆ ಅವನು ಅವನ ಪಾಲನೆ ಮಾಡಿದ ವ್ಯಕ್ತಿಯು. ಮಗುವಿನ ಅಳಿಕೆಯನ್ನು ಕಂಡು, ಶಂಕಿತನ ಕಣ್ಣಿನಿಂದಲೂ ನೀರು ಹರಿಯತೊಡಗಿತು,

ಆತ ಹಣದ ಆಸೆಯಿಂದ ಮಗುವನ್ನು ಕಿಡ್ನಾಪ್‌ ಮಾಡಿದ್ದ. ಆದ್ರೆ ಪೊಲೀಸರ ಕೈಗೆ ಸಿಕ್ಕಿ ಬೀಳುವ ಭಯದಿಂದ ಇರುವ ಜಾಗವನ್ನು ಬದಲಾಯಿಸುತ್ತಿದ್ದ . ಆದರೆ ಹಣದ ಆಸೆಯನ್ನು ಬಿಟ್ಟಿದ್ದ. ಆದರೆ ಆಗಾಗ ಮಗುವಿನ ತಂದೆಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಪೊಲೀಸರು ಈ ಪ್ರಸಂಗವನ್ನು ನಿರ್ವಹಿಸಿದರೂ, ಮಕ್ಕಳು ಅಪಹರಣದಂತಹ ಘಟನೆಗಳಲ್ಲಿ ಯಾವ ರೀತಿಯ ಮಾನಸಿಕ ಹಾನಿಗೆ ಒಳಗಾಗುತ್ತಾರೆ ಎಂಬುದನ್ನು ಈ ಘಟನೆ ಎತ್ತಿಹಿಡಿಯುತ್ತದೆ.

Scroll to Top