ಇನ್ನುಂದೆ ಕ್ಯೂ ಆರ್‌ ಕೋಡ್‌ ಮೂಲಕ ರೈಲ್ವೆ ಟಿಕೆಟ್‌ ಪಡೆಯಬಹುದು

ಮೈಸೂರು : ಆಧುನಿಕ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಯಾಣಿಕರ ಸುಲಭವಾಗಲು ಕ್ಯೂ ಆರ್‌ ಕೋಡ್‌ ಮೂಲಕ ಟಿಕೆಟ್‌ ಪಡೆಯುವ ವಿಧಾನವನ್ನು ಜಾರಿಗೊಳಿಸಿಲಿದೆ. ಪ್ರಯಾಣಿಕರು ಟಿಕೆಟ್ ಗಳನ್ನು ಖರೀದಿಸುವ ಪದ್ಧತಿಯಲ್ಲಿ ಬದಲಾವಣೆ ತಂದಿದ್ದು , ಈ ಹೊಸ ಸೌಲಭ್ಯವನ್ನು ಈಗ 81 ನಿಲ್ದಾಣಗಳ 94 ಅನ್‌ ರಿಸರ್ವ ಟಿಕೆಟಿಂಗ್‌ ಸಿಸ್ಟಮ್‌ (ಯುಟಿಎಸ್‌ ) ಕೌಂಟರ್ ಗಳಲ್ಲಿ ಸಿಗುತ್ತದೆ.

ಇದು ಪ್ರಯಾಣಿಕರಿಗೆ ಯುಪಿಎ ಅಪ್ಲಿಕೇಶನ್ಗಳ ಮೂಲಕ ಪಾವತಿ ಮಾಡಲು ಮತ್ತು ಪಾವತಿ ದೃಢೀಕರಣದ ನಂತರ ಟಿಕೆಟ್ ಗಳನ್ನು ಸ್ವೀಕರಿಸಲು , ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ಡಿಜಿಟಲ್‌ ವ್ಯವಹಾರಗಳನ್ನು ಉತ್ತಮಗೊಳಿಸಲು ರೈಲ್ವೆ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ. ಕ್ಯೂ ಆರ್‌ ಕೋಡ್‌ ಪಾವತಿ ಸೌಲಭ್ಯ ಈಗ ಎಲ್ಲಾ ವಿಭಾಗೀಯ ಅಂಗಡಿಗಳು , ಹೋಟೇಲ್ ಗಳಲ್ಲಿ , ಶೌಚಾಲಯಗಳಲ್ಲಿ ಪಾವತಿ ಮಾಡಲು ಮತ್ತು ಪಾರ್ಕಿಂಗ್‌ ಸ್ಥಳಗಳಲ್ಲಿ ಹೆಚ್ಚು ಉಪಯೋಗಕರವಾಗಿದೆ.

ರೈಲ್ವೆ ಇಲಾಖೆಯು ಕ್ಯೂ ಆರ್‌ ಕೋಡ್‌ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಪ್ರಯಾಣಿಕರು ತಮ್ಮ ಮೊಬೈಲ್ ವ್ಯಾಲ್ಲಟ್‌ ಅಥವಾ ಯುಪಿಐ ಸಕ್ರಿಯಗೊಳಿಸಿದ ಬ್ಯಾಂಕ್‌ ಖಾತೆಗಳನ್ನು ಬಳಸಿಕೊಂಡು ಸಲೀಸಾಗಿ ಪಾವತಿಸಬಹುದು. ಟಿಕೆಟ್‌ ಬುಕ್ಕಿಂಗ್‌ ಹೆಷ್ಷಿಸುವ ಪ್ರಯತ್ನದಲ್ಲಿ ,ನಾಲ್ಕು ನಿಲ್ದಾಣದಲ್ಲಿ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ (ಪಿಆರ್ ಎಸ್)‌ ಟಿಕೆಟ್‌ ಬುಕಿಂಗ್‌ ಗಾಗಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಸೌಲಭ್ಯವನ್ನು ಸಹ ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ.

ಕ್ಯೂ ಆರ್‌ ಕೋಡ್‌ ವ್ಯವಸ್ಥೆ ಜಾರಿಯಿಂದಾಗಿ ಪ್ರಯಾಣಿಕರು ತಮ್ಮ ಮೊಬೈಲ್‌ ವ್ಯಾಲೆಟ್‌ ಗಳು ಅಥವಾ ಯುಪಿಐ ಸಕ್ರಿಯಗೊಳಿಸಿದ ಬ್ಯಾಂಕ್‌ ಖಾತೆಗಳನ್ನು ಬಳಸಿಕೊಂಡು ಸುಲಭವಾಗಿ ಪಾವತಿಗಳನ್ನು ಮಾಡಬಹುದು. ಪ್ರಯಾಣೀಕರಿಗೆ ಯುಪಿಐ ಅಪ್ಲೀಕೇಶನ್ ಗಳ ಮೂಲಕ ಪಾವತಿಗಳನ್ನು ಮಾಡಲು ಮತ್ತು ಪಾವತಿ ದೃಢೀಕರಣದ ನಂತರ ಟಿಕೆಟ್ ಗಳನ್ನು ಸ್ವೀಕರಿಸಲು ಸುಲಭವಾಗುತ್ತದೆ.

ಉದ್ಘಾಟನೆಯಾದ ಮೊದಲ ದಿನವೇ ಮಾಲ್ ಲೂಟಿ ಮಾಡಿದ ಪಾಕಿಸ್ತಾನಿಯರು : ವೀಡಿಯೋ ವೈರಲ್‌

ಮಗುವಿನ ನಾಮಕರಣದ ದಿನವೇ ತಾಯಿ ಹೃದಯಘಾತದಿಂದ ಸಾವು

Scroll to Top