ಸ್ತನ ಕ್ಯಾನ್ಸರ್‌ ಕಾಯಿಲೆಯನ್ನು ಗೆದ್ದ ಚಿತ್ರರಂಗದ ದಿಟ್ಟಿಯರು..

ಸ್ತನ ಕ್ಯಾನ್ಸರ್‌ ಹೆಚ್ಚಾಗಿ ಕಂಡುಬರುವ ದೇಶಗಳಲ್ಲಿ ಭಾರತದ ಹೆಸರೂ ಕೂಡ ಮಂಚೂಣಿಯಲ್ಲಿದೆ. ಕಳೆದ ವರ್ಷಗಳಲ್ಲಿ ೩೦ ರ ವಯಸ್ಸು ದಾಟಿದ ಮಹಿಳೆಯರು ಸ್ತನ ಕ್ಯಾನ್ಸರ್‌ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿದೆ.

Image credited to hinakhanofficial account

ಬಾಲಿವುಡ್‌ ನಟಿ ಹಿನಾ ಖಾನ್‌ ಅವರು ತನಗೆ ಸ್ತನ ಕ್ಯಾನ್ಸರ್‌ (Breast Cancer ) ಇದೆಯೆಂದು ಹೇಳಿಕೊಂಡಿದ್ದಾರೆ. ತಾನು ಅದನ್ನು ಧೈರ್ಯವಾಗಿಯೇ ಎದುರಿಸಿ ಬೇಗ ಗುಣಮುಖರಾಗಿ ಬರುತ್ತೇನೆ ಎಂದು ಹೇಳಿದ್ದಾರೆ . ಅಭಿಮಾನಿಗಳ ಹಿನಾ ಖಾನ್‌ ಅವರು ಅದಷ್ಷು ಬೇಗ ಗುಣಮುಖರಾಗಿ ಬರಲಿಯೆಂದು ಹಾರೈಸಿದ್ದಾರೆ.

ಭಾರತೀಯರಲ್ಲಿ ಸ್ತನ ಕ್ಯಾನ್ಸರ್‌

ಪ್ರತಿ ೨೮ ಭಾರತೀಯ ಮಹಿಳೆಯರಿಗೆ ೧ ಬಾರಿ ಸ್ತನ ಕ್ಯಾನ್ಸರ್‌ ಎದುರಾಗುತ್ತದೆ. ಹೆಚ್ಚಿನ ಸಂಧರ್ಭಗಳಲ್ಲಿ , ಸ್ತನ ಕ್ಯಾನ್ಸರ್‌ ಹೆಚ್ಚು ಸಾವನ್ನಪ್ಪುವ ದೇಶಗಳ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ ನಿಂದ ಬಳಲುತ್ತಿದ್ದಾರೆ ಎಂದು ಇಂಡಿಯಾ ಟಿವಿಯ ವರದಿ ತಿಳಿಸಿದೆ.

೨೦೨೨ರ ಅಂತ್ಯದ ವೇಳೆಗೆ ಐದು ವರ್ಷಗಳ ಅವಧಿಯಲ್ಲಿ ೫.೨೫ ಲಕ್ಷಕ್ಕೂ ಹೆಚ್ಚು ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಇಂಡಿಯಾ ಟಿವಿಯ ವರದಿ ತಿಳಿಸಿದೆ.

ಸ್ತನ ಕ್ಯಾನ್ಸರ್‌ ಬಗ್ಗೆ ಮುಕ್ತವಾಗಿ ಮಾತಾಡಿ ಆ ಬಗ್ಗೆ ಜಾಗ್ರತೆಯನ್ನು ವಹಿಸಲು ಸಲಹೆ – ಸೂಚನೆ ನೀಡುವವರು ತೀರಾ ಕಡಿಮೆ . ಈ ಬಗ್ಗೆ ನಟಿಯರು ಧ್ವನಿ ಎತ್ತಿ ಇತರರಿಗೆ ಧೈರ್ಯವನ್ನು ತುಂಬಿದ್ದಾರೆ.

ಮಹಿಮಾ ಚೌಧರಿ:

ಬಾಲಿವುಡ್ ನಟಿ ಮಹಿಮಾ ಚೌಧರಿ ಅವರಿಗೆ 2021ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಮೊದಲಿಗೆ ಅವರಿಗೆ ಇದರ ಬಗ್ಗೆ ಅರಿವಿರಿಲ್ಲ ಸಾಮಾನ್ಯ ಚೆಕ್ಅಪ್ ಎಂದು ಹೋದಾಗ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು . ಇದಾದ ವರ್ಷಗಳ ಬಳಿಕ ಕ್ಯಾನ್ಸರ್ ಮುಕ್ತರಾದರು.

ತಾಹೀರಾ ಕಶ್ಯಪ್:

ಬಾಲಿವುಡ್ ನಟ ಆಯುಷ್ನಾನ್ ಖಾನ್ ಪತ್ನಿ ತಾಹೀರ ಕಶ್ಯಪ್ ಕ್ಯಾನ್ಸರ್ ಇರುವ ಬಗೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. 2018ರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿತು. 2019ರಲ್ಲಿ ಕ್ಯಾನ್ಸರ್ 0 ಸ್ಟೇಜ್ ಇಂದ ಮುಕ್ತರಾಗಿರುವ ಮಾಹಿತಿಯನ್ನು ಹೇಳಿಕೊಂಡಿದ್ದರು.

Image credited to tahirkashyap official account
ಮುಮ್ತಾಜ್‌ :

೨೦೦೨ರಲ್ಲಿ ತನ್ನ ೫೨ನೇ ವಯಸ್ಸಿನಲ್ಲಿ ಹಿರಿಯ ನಟಿ ಮುಮ್ತಾಜ್‌ ಅವರಿಗೆ ಸ್ತನ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಮುಮ್ತಾಜ್‌ ಅವರು ವರದಿಗಳ ಪ್ರಕಾರ ಆರು ಕೀಮೋಥೆರೆಪಿ ಮತ್ತು ಒಟ್ಟು ೩೫ ರೇಡಿಯೇಷನ್‌ ಚಿಕಿತ್ಸೆಗಳಿಗೆ ಒಳಗಾಗಿದ್ದರು.

ಹಂಸ ನಂದಿನಿ

ಟಾಲಿವುಡ್‌ ನಟಿ ಹಂಸ ನಂದಿನಿ ಅವರಿಗೆ ಸ್ತನ ಕ್ಯಾನ್ಸರ್‌ ಇರುವುದು ೨೦೨೧ ರಲ್ಲಿ ಪತ್ತಯಾಗಿತ್ತು.ಕೊನೆಗೂ ಅವರ ಸ್ತನ ಕ್ಯಾನ್ಸರ್‌ ಗುಣಮುಖರಾಗಿದ್ದಾರೆ.

ಛವಿ ಮಿತ್ತಲ್‌ ;

ಖ್ಯಾತ ಕಿರುತೆರೆ ನಟಿ ಛವಿ ಮಿತ್ತಲ್‌ ಅವರಿಗೆ ಸ್ತನ ಕ್ಯಾನ್ಸರ್‌ ೨೦೨೨ರ ಏಪ್ರಿಲ್ ನಲ್ಲಿ ಕಾಣಿಸಿಕೊಂಡಿತ್ತು. ಜಿಮ್‌ ಮಾಡುವಾಗ ಅವರಿಗೆ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು . ಸ್ಕ್ಯಾನ್‌ ಬಳಿಕ ಅವರ ಕ್ಯಾನ್ಸರ್‌ ಇರುವುದು ಪತ್ತಯಾಗಿ , ಸುದೀರ್ಘ ಅವಧಿಯ ಕಾಲ ಹೋರಾಡಿದ ಬಳಿಕ ಅವರು ಕೊನೆಗೂ ಕ್ಯಾನ್ಸರ್‌ ಗೆದ್ದು ಬಂದಿದ್ದರು.

Images credited to chavimittal official account
ಗೌತಮಿ :

ಸೌತ್‌ ನಟಿ ಗೌತಮ್‌ ಅವರಿಗೆ ೨೦೦೫ ರಲ್ಲಿ ಸ್ತನ ಕ್ಯಾನ್ಸರ್‌ ಪತ್ತೆಯಾಗಿತ್ತು. ದಿಟ್ಟವಾಗಿ ಇದನ್ನು ಎದುರಿಸಿದ ಅವರು ವೈದ್ಯರ ಸಲಹೆಯನ್ನು ಪಾಲಿಸಿ, ಕೊನೆಗೂ ಕ್ಯಾನ್ಸರ್‌ ಗೆದ್ದು ಬಂದಿದ್ದರು.

ಟೀಕೆಗಳಿಗೆ ಉತ್ತರ ಕೊಟ್ಟ ದೀಪಿಕಾ : ರಣವೀರ್‌ ಜೊತೆ ಬೇಬಿ ಬಂಪ್ಸ್‌ ಪೋಟೋಶೂಟ್‌

ನಟಿ ಭೂಮಿ ಶೆಟ್ಟಿ: 11 ದಿನಗಳ ಆಂತರಿಕ ಶಾಂತಿಗಾಗಿ ಹೊರಗಿನ ಪ್ರಪಂಚದಿಂದ ದೂರ

Scroll to Top