ಟೀಕೆಗಳಿಗೆ ಉತ್ತರ ಕೊಟ್ಟ ದೀಪಿಕಾ : ರಣವೀರ್‌ ಜೊತೆ ಬೇಬಿ ಬಂಪ್ಸ್‌ ಪೋಟೋಶೂಟ್‌

ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪ್ರೆಗ್ನೆನ್ಸಿ ಪೋಟೋಶೂಟ್‌ ಮೂಲಕ ಟೀಕೆ ಹಾಗೂ ಊಹಾಪೋಹಗಳಿಗೆ ಉತ್ತರ ನೀಡಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಜೊತೆಯಾಗಿ ಪ್ರೆಗ್ನೆನ್ಸಿ ಪೋಟೋಶೂಟ್‌ ಮಾಡಿಸಿದ್ದಾರೆ. ಬೇಬಿ ಬಂಪ್‌ ತೋರಿಸಿದ ಹಲವು ಪೋಟೋಗಳನ್ನು ದೀಪಿಕಾ ಹಂಚಿಕೊಂಡಿದ್ದಾರೆ. ಎಲ್ಲಾ ಪೋಟೋಗಳನ್ನು ಬ್ಲಾಕ್‌ ಅಂಡ್‌ ವೈಟಿ ಮೂಡ್‌ನಲ್ಲಿದೆ.

ಬಾಲಿವುಡ್‌ ಬೆಡಗಿ ದೀಪಿಕಾ ಹಾಗೂ ರಣವೀರ್‌ ಸಿಂಗ್‌ ದಂಪತಿ ಪೋಷಕರಾಗುತ್ತಿರುವ ಖುಷಿ ವಿಚಾರ ಹಂಚಿಕೊಂಡ ನಂತರ ಊಹಾಪೋಹಗಳು ಹರಿದಾಡಿತ್ತು. ದೀಪಿಕಾ ಗರ್ಭಿಣಿ ಅನ್ನೋದು ಸುಳ್ಳು , ಎಂದೆಲ್ಲಾ ಹಲವು ಗೊಂದಲದ ಹಾಗೂ ಆತಂಕಕಾರಿ ಮಾಹಿತಿ ಹರಿದಾಡಿತ್ತು. ಆದರೆ ದೀಪಿಕಾ ಎಲ್ಲಾ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ.

ತಮ್ಮ ಶೋಶಿಯಲ್‌ ಮೀಡಿಯಾದಲ್ಲಿ ಈ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಮಲೈಕಾ ಅರೋರಾ , ಬಿಪಾಶಾ ಬಸು , ಕನ್ನಡದ ತಾರೆಯರಾದ ನಮ್ರತಾ ಗೌಡ, ರಂಜನಿ ರಾಘವನ್‌ , ಶ್ವೇತಾ ಚಂಗಪ್ಪ ಹೀಗೆ ಹಲವಾರು ನಟಿಯರು ಶುಭ ಹಾರೈಸಿದ್ದಾರೆ. ಅಭಿಮಾನಿಗಳು ತಮ್ಮ ಕಾತರವನ್ನು ವ್ಯಕ್ತಪಡಿಸಿದ್ದಾರೆ.

Image collected from deepikapadukone official account

ಸಪ್ಟೆಂಬರ್‌ ತಿಂಗಳು ೨೮ ರಂದು ಮಗುವಿಗೆ ಜನ್ಮ ನೀಡುವುದಾಗಿ ಕೇಳಿ ಬರುತ್ತಿದ್ದು, ಸೌತ್‌ ಮುಂಬೈಯಲ್ಲಿ ಮಗುವನ್ನು ಬರಮಾಡಿಕೊಳ್ಳಲಿದ್ದಾರೆ ಅನ್ನುವ ಮಾಹಿತಿ ಬಹಿರಂಗವಾಗಿದೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 2018ರ ನವೆಂಬರ್‌ನಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಟಲಿಯ ಕೇಮ್ ಹಾಸ್ಟೆಡ್ ಲೇಕ್ ಕೋಮೋದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಅವರ ವಿವಾಹವು ತೆಲುಗು ಮತ್ತು ಸಿಂಧಿ ರೀತಿಯಲ್ಲಿ, ಎರಡು ವಿಭಿನ್ನ ಪ್ರಕ್ರಿಯೆಗಳೊಂದಿಗೆ ನಡೆದಿತ್ತು.

ದೀಪಿಕಾ ತಾಯಿಯಾಗುತ್ತಿರುವ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಹಲವು ಸುಳ್ಳು ಸುದ್ದಿಗಳು ಹರಿದಾಡಿತ್ತು. ದೀಪಿಕಾ ಹೊಟ್ಟೆ ಕುರಿತು ಹಲವರು ಕಮೆಂಟ್‌ ಮಾಡಿದ್ದರು. ದೀಪಿಕಾ ಗರ್ಭಿಣಿ ಆಗಿಲ್ಲ ಎಂದೂ ಆರೋಪಗಳು ಕೇಳಿಬಂದಿತ್ತು. ದೀಪಿಕಾ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುತ್ತಿದ್ದಾರೆ ಅನ್ನೋ ಸುಳ್ಳು ಮಾಹಿತಿಗಳು ಹರಿದಾಡಿತ್ತು.

ಟೇರೆಸ್‌ ಮೇಲೆ ಹಾಕಿದ್ದ ಮಹಿಳೆಯರ ಒಳ ಉಡುಪು ಕಳ್ಳತನ ಮಾಡುವ ಕಾಮುಕ ಕಳ್ಳ

ಸ್ತನ ಕ್ಯಾನ್ಸರ್‌ ಕಾಯಿಲೆಯನ್ನು ಗೆದ್ದ ಚಿತ್ರರಂಗದ ದಿಟ್ಟಿಯರು..

Scroll to Top