ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಬಗ್ಗೆ ಭಾರಿ ಕುತೂಹಲ ಸೃಷ್ಠಿಯಾಗಿದೆ. ಈ ಬಾರಿ ಜನಪ್ರಿಯ ರಿಯಾಲಿಟಿ ಶೋನಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಕೂಡ ಹೆಚ್ಚಾಗಿದ್ದು, ಸಂಭಾವ್ಯ ಪಟ್ಟಿಯು ಸದ್ದು ಮಾಡುತ್ತಿದೆ.
ಈಗಾಗಲೇ ಪ್ರೋಮೋ ರಿಲೀಸ್ ಆಗಿದ್ದು , ನಿರೂಪಣೆ ಯಾರು ಮಾಡ್ತಾರೆ ಅನ್ನೋದೆ ದೊಡ್ಡ ಚರೆಯ ವಿಷ್ಯವಾಗಿದೆ. ಇವುಗಳ ಮಧ್ಯ ಸೀಸನ್ ೧೧ ರ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ಸೋಶೀಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ . ಯಾರೆಲ್ಲಾ ಇದ್ದಾರೆ , ಇದರಲ್ಲಿ ನಿಮ್ಮ ಫೇವರೇಟ್ ಸ್ಪರ್ಧಿಗಳು ಯಾರು ನೋಡೋಣ ಬನ್ನಿ .
ವರ್ಷ ಕಾವೇರಿ ಮತ್ತು ವರುಣ ಆರಾಧ್ಯ
ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೆಟರ್ ಆಗಿ ಸಖತ್ ಸೌಂಡ್ ಮಾಡಿದ್ದ ಜೋಡಿ ವರ್ಷಾ ಮತ್ತು ವರುಣ . ಇಬ್ಬರು ಆರಂಭದಲ್ಲಿ ಲವ್ ಮಾಡುತ್ತಿದ್ದು , ನಂತರ ವರುಣ್ ಕಲರ್ಸ ಕನ್ನಡದಲ್ಲಿ ಪ್ರಸರಾಗುತ್ತಿದ್ದ ಬೃಂದಾವನ ಸೀರಿಯಲ್ ನಲ್ಲಿ ನಟಿಸುತ್ತಿದ್ದರು ಇದೀಗ ಇಬ್ಬರೂ ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.
ಆಕಾಶ್ – ತನ್ವಿ ಬಾಲರಾಜ್
ಮುಕ್ತಾಯದ ಹಂತದಲ್ಲಿರುವ ಕೆಂಡ ಸಂಪಿಗೆ ಧಾರವಾಹಿಯ ನಾಯಕ ಆಕಾಶ್ ಮತ್ತು ಅಂತರಪಟ ಧಾರಾವಾಹಿಯಲ್ಲಿ ನಾಯಕಿ ಆರಾಧನಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ತನ್ವಿ ಬಾಲರಾಜ್ ಕೂಡ ಭಾಗವಹಿಸುತ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಚಂದ್ರಪ್ರಭ – ರಾಘವೇಂದ್ರ
ಚಂದ್ರಪ್ರಭ ಮತ್ತು ರಾಫವೇಂದ್ರ ಇಬ್ಬರೂ ಗಿಚ್ಚಿ ಗಿಲಿಗಿಲಿಯಿಂದ ಗುರುತಿಸಿಕೊಂಡಿದ್ದವರು. ಈ ಇಬ್ಬರು ಬಿಗ್ ಬಾಸ್ ಮನೆಗೆ ಬಂದರೆ ನೋಡುಗರಿಗೆ ಮನರಂಜನೆಯ ಹಬ್ಬ ಇರುತ್ತದೆ.
ಪಂಕಜ್ ನಾರಾಯಣ್ ಮತ್ತು ರೇಖಾ
ಚೆಲುವಿನ ಚಿಲಿಪಿಲಿ ಸಿನಿಮಾದ ಮೂಲಕ ಸದ್ದು ಮಾಡಿದ ನಟ ಹಾಗೂ ಖ್ಯಾತ ನಿರ್ದೇಶಕ ಎಸ್ ನಾರಾಯಣ ಅವರ ಮಗ ಪಂಕಜ್ ನಾರಾಯಣ್ ಕೂಡ ಬಿಗ್ ಬಾಸ್ ಬರಲಿದ್ದಾರೆ ಎನ್ನುವ ಸುದ್ದಿ ಇದೆ. ಹುಚ್ಚ ಸಿನಿಮಾದ ರೇಖಾ ಕೂಡ ಬಿಗಾಬಾಸ್ ಕನ್ನಡಕ್ಕೆ ಬರಲಿದ್ದಾರೆ ಎಂಬ ಸುದ್ದಿ ಇದೆ.
ಸುಕೃತಾ ನಾಗ್ , ಅಮಿತಾ ಸದಾಶಿವ
ಅಗ್ನಿಸಾಕ್ಷಿ, ಕಾವೇರಿ ಕನ್ನಡ ಮೀಡಿಯಂ ಮತ್ತು ಲಕ್ಷಣ ಸೀರಿಯಲ್ ಮಿಂಚಿದ ಸುಕೃತಾ ನಾಗ್ ಹಾಗೂ ಒಲವಿನ ನಿಲ್ದಾಣ ಸೀರಿಯಲ್ ನ ಅಮಿತಾ ಸದಾಶಿವ ಕೂಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವ ಚಾನ್ಸ್ ಇದೆ ಎನ್ನುವ ಸಂಭವವಿದೆ.
ತರುಣ್ ಚಂದ್ರ – ಚೇತನ್ ಚಂದ್ರ
ಖುಷಿ , ಲವ್ ಗುರು , ಗೆಳೆಯ ಸಿನಿಮಾಗಳ ಮೂಲಕ ಭರ್ಜರಿ ಮನರಂಜನೆ ನೀಡಿದ ಚಾಕಲೇಟ್ ಹೀರೋ ತರುಣ್ ಚಂದ್ರ ಹಾಗೂ ಪಿ.ಯು.ಸಿ, ಪ್ರೇಮಿಸಂ , ರಾಜಧಾನಿ ಸಿನಿಮಾಗಳಲ್ಲಿ ಮಿಂಚಿ ಸತ್ಯಂ ಶಿವಂ ಸುಂದರಂ ಧಾರಾವಾಹಿಗಳಲ್ಲಿ ನಟಿಸಿದ್ದ ಚೇತನ್ ಚಂದ್ರ ಕೂಡ ಸ್ಪರ್ಧಿಸಲಿದ್ದಾರೆ.
ಅಶ್ವಿನಿ ಗೌಡ ಮತ್ತು ಶರ್ಮಿಳಾ ಗೌಡ
ಕನ್ನಡದ ನಟಿ , ನಿರೂಪಕಿಯಾಗಿ ಗುರುತಿಸಿಕೊಂಡಿರುವ ಸದ್ಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯದರ್ಶಿಯಾಗಿ ಕನ್ನಡ ಪರ ಹೋರಾಟಗಳಲ್ಲಿ ಮಿಂಚಿದ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಹಾಗೂ ಗೀತಾ ಸೀರಿಯಲ್ ನಲ್ಲಿ ವಿಲನ್ ಭಾನುಮತಿ ಪಾತ್ರದಲ್ಲಿ ಮಿಂಚಿದ ನಟಿ ಶರ್ಮಿಳಾ ಗೌಡ ಕೂಡ ಬರಲಿದ್ದಾರೆ ಎನ್ನುವ ಸುದ್ದಿ ಇದೆ.
ಮೋಕ್ಷಿತಾ ಪೈ – ಗೌತಮಿ ಜಾಧವ್
ಮೋಕ್ಷಿತಾ ಪೈ ಹಾಗೂ ಗೌತಮಿ ಜಾದವ್ ಇಬ್ಬರೂ ಸಹ ಕನ್ನಡ ಕಿರುತೆರೆಯ, ಅದರಲ್ಲೂ ಝೀ ಕನ್ನಡದ ಜನಪ್ರಿಯ ನಾಯಕಿಯರು. ಮೋಕ್ಷಿತಾ ಪೈ ಪಾರು ಆಗಿ ಮಿಂಚಿದ್ದರೆ , ಗೌತಮಿ ಜಾದವ್ ಸತ್ಯ ಆಗಿ ಧೂಳೆಬ್ಬಿಸಿದ್ದರು. ಇವರಿಬ್ಬರು ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾ ಪೋಹ ಕೂಡ ಇದೆ.
ಟೇರೆಸ್ ಮೇಲೆ ಹಾಕಿದ್ದ ಮಹಿಳೆಯರ ಒಳ ಉಡುಪು ಕಳ್ಳತನ ಮಾಡುವ ಕಾಮುಕ ಕಳ್ಳ
For More updates follow my Whatsup channel Infomate https://whatsapp.com/channel/0029Vaj9OZg4CrfZhiHrRW3C