ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರವನ್ನು ಭಾವಪೂರ್ಣವಾಗಿ ಸ್ವೀಕರಿಸಿದ ಯೂನೆಸ್‌ ಜರೂ

ಸೋಶಿಯಲ್‌ ಸ್ಟಾರ್ ಯುನೆಸ್‌ ಜರೂ ಅವರಿಗೆ ಅಭಿಮಾನಿಗಳೆಲ್ಲ ಸೇರಿ ಪುನೀತ್‌ ರಾಜ್ ಕುಮಾರ್‌ ಅವರ ಪೋಟೋವನ್ನು ಗಿಫ್ಟ್‌ ಆಗಿ ನೀಡಿದ್ದಾರೆ.

ಯುನೆಸ್‌ ಜರೂ ಅವರು ಭಾರತಕ್ಕೆ ಭೇಟಿ ನೀಡಿದಾಗ, ತಾಜ್ ಮಹಲ್‌, ಜೈಪುರ, ಮುಂಬೈ, ಕೇರಳ, ಹೈದರಾಬಾದ್‌ ಮತ್ತು ಬೆಂಗಳೂರು ಸೇರಿದಂತೆ ಹಲವಾರು ಪ್ರಖ್ಯಾತ ಸ್ಥಳಗಳಿಗೆ ಆಗಮಿಸಿದರು. ಈ ಪ್ರಯಾಣದ ವೇಳೆ, ತಮ್ಮ ಅಭಿಮಾನಿಗಳ ಸಂಭ್ರಮಕ್ಕೆ, 10 ಜನರಿಗೆ ಐಫೋನ್‌ಗಳನ್ನು ಗಿಫ್ಟ್‌ ಆಗಿ ನೀಡುತ್ತಿದ್ದಾರೆ.ತಮ್ಮಎರಡು ಸಾಮಾಜಿಕ ತಾಣದ ಅಕೌಂಟ್‌ ಗಳನ್ನು ಫಾಲೋ ಮಾಡಿದ್ದವರಿಗೆ ಐಪೋನ್‌ ನನ್ನು ಫ್ರೀ ಆಗಿ ನೀಡುತ್ತಿದ್ದಾರೆ.

ಯುನೆಸ್‌ ಜರೂ ಅವರು ಬೆಂಗಳೂರಿಗೆ ಬಂದಾಗ, ಅಭಿಮಾನಿಯೊಬ್ಬರು ಅವರನ್ನು ಭೇಟಿ ಮಾಡಿ, ಪುನೀತ್‌ ರಾಜ್ ಕುಮಾರ್‌ ಅವರ ಭಾವಚಿತ್ರವನ್ನು ಗಿಫ್ಟ್‌ ಆಗಿ ನೀಡಿದರು. ಯುನೆಸ್‌ ಜರೂ ಅವರು ಈ ವಿಶೇಷ ಕ್ಷಣವನ್ನು ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇರ್ ಮಾಡಿದರು. ಈ ವಿಡಿಯೋ ಬಹಳ ಪ್ರಚಲಿತವಾಗಿದ್ದು, 8.9 ಮಿಲಿಯನ್‌ ವೀಕ್ಷಣೆ ಪಡೆದುಕೊಂಡಿದೆ.

ಈ ವಿಡಿಯೋದಲ್ಲಿ, ಯುನೆಸ್‌ ಅವರು ಪುನೀತ್‌ ರಾಜ್ ಕುಮಾರ್‌ ಅವರ ಭಾವಚಿತ್ರವನ್ನು ಸ್ವೀಕರಿಸುವಾಗ ತೋರಿದ ಭಾವನೆಗಳು ಮತ್ತು ಆ ಕ್ಷಣದ ಪ್ರಾಮುಖ್ಯತೆವು ಬಹಳ ಪ್ರಭಾವಶಾಲಿಯಾಗಿ ಬಿಂಬಿತವಾಗಿದೆ. ಪುನೀತ್‌ ರಾಜ್ ಕುಮಾರ್‌ ಅವರ ಅಭಿಮಾನಿಗಳು ಮತ್ತು ಯುನೆಸ್‌ ಜರೂ ಅವರ ಅನುಯಾಯಿಗಳು ಈ ವಿಡಿಯೋವನ್ನು ಹರ್ಷದಿಂದ ಸ್ವೀಕರಿಸಿದ್ದಾರೆ.

ಯುನೆಸ್‌ ಜರೂ ಅವರು ಭಾರತದ ವಿವಿಧ ರಾಜ್ಯಗಳಲ್ಲಿ ತಮ್ಮನ್ನು ಕಾಣಲು ಕಾತರಿಸುತ್ತಿದ್ದ ಅಭಿಮಾನಿಗಳನ್ನು ಭೇಟಿ ಮಾಡುತ್ತಾ, ದೇಶದ ಸೌಂದರ್ಯವನ್ನು ಆನಂದಿಸಿದರು. ಈ ಎಲ್ಲಾ ಪ್ರವಾಸದ ಸಮಯದಲ್ಲಿ, ಅವರು ಬಾಲಿವುಡ್‌ ನಟ ಟೈಗರ್‌ ಶ್ರಾಫ್‌ ಅವರನ್ನು ಸಹ ಭೇಟಿಯಾದರು.

ಭಾರತದ ಇನ್ನೂ ಹಲವಾರು ಸ್ಥಳಗಳನ್ನು ಭೇಟಿ ಮಾಡಲು ಯೋಜಿಸುತ್ತಿರುವ ಯುನೆಸ್‌ ಅವರ ಪ್ರವಾಸ ಅಭಿಮಾನಿಗಳಿಗೆ ಬಹಳ ಉತ್ಸಾಹವನ್ನುಂಟು ಮಾಡಿದೆ.

ಪ್ರೀತಿ ಮಾಡಿದ್ದಕ್ಕೆ ಮಗಳನ್ನೇ ತುಂಡು ತುಂಡಾಗಿ ಕತ್ತರಿಸಿದ ತಂದೆ
ಪ್ರೀತಿ ಮಾಡಿದ್ದಕ್ಕೆ ಮಗಳನ್ನೇ ತುಂಡು ತುಂಡಾಗಿ ಕತ್ತರಿಸಿದ ತಂದೆ
ಪೋಸ್ಟ ಮಾರ್ಟಮ್‌ ರೂಮ್ ನಲ್ಲಿಯೆ ರೊಮ್ಯಾನ್ಸ್‌ ಮಾಡುತ್ತಿರುವ ಪ್ರೇಮಿಗಳು
ಪೋಸ್ಟ ಮಾರ್ಟಮ್‌ ರೂಮ್ ನಲ್ಲಿಯೆ ರೊಮ್ಯಾನ್ಸ್‌ ಮಾಡುತ್ತಿರುವ ಪ್ರೇಮಿಗಳು
Scroll to Top