ಒಂದೇ ದಿನದಲ್ಲಿ 23 ಹಲ್ಲುಗಳ ಶಸ್ತ್ರಚಿಕಿತ್ಸೆ: 12 ಹೊಸ ಹಲ್ಲುಗಳ ಅಳವಡಿಕೆ ಬಳಿಕ ಹೃದಯಾಘಾತದಿಂದ ಸಾವು

ಚೀನಾದ ಝಜಿಯಾಂಗ್ ಪ್ರಾಂತ್ಯದ ಜಿನುವಾದಲ್ಲಿ ಇತ್ತೀಚೆಗೊಂದು ಆಘಾತಕಾರಿ ಘಟನೆ ನಡೆದಿದೆ, ಇದರಲ್ಲಿ ವ್ಯಕ್ತಿಯೊಬ್ಬರು ಒಂದು ದಿನದಲ್ಲಿ 23 ಹಲ್ಲುಗಳನ್ನು ತೆಗೆದು, 12 ಹೊಸ ಹಲ್ಲುಗಳನ್ನು ಅಳವಡಿಸಿದ ಬಳಿಕ 13 ದಿನಗಳ ನಂತರ ಮೃತಪಟ್ಟಿದ್ದಾರೆ.

ಈ ಘಟನೆ ಸೆಪ್ಟೆಂಬರ್ 2 ರಂದು, ಆನ್‌ಲೈನ್‌ನಲ್ಲಿ ವ್ಯಕ್ತಿಯ ಕುಟುಂಬ ಸದಸ್ಯರೊಬ್ಬರು ಈ ಪ್ರಕರಣವನ್ನು ಹಂಚಿಕೊಂಡ ನಂತರ ಬೆಳಕಿಗೆ ಬಂದಿದೆ.

ಈ ವ್ಯಕ್ತಿಯ ಚಿಕಿತ್ಸೆಯು ದಂತ ಚಿಕಿತ್ಸೆಯ ಭಾಗವಾಗಿದ್ದು, ಹಲ್ಲುಗಳನ್ನು ದೊಡ್ಡ ಸಂಖ್ಯೆಯಲ್ಲಿ ತೆಗೆದು ಹಾಕಿ, ತಕ್ಷಣವೇ ಹೊಸ ಹಲ್ಲುಗಳನ್ನು ಅಳವಡಿಸುವ ಅಪರೂಪದ ಪ್ರಕರಣವಾಗಿತ್ತು.

18 ವರ್ಷದ ಸಮೋಸಾ ಮಾರಾಟಗಾರ NEET ಪರೀಕ್ಷೆಯಲ್ಲಿ 664 ಅಂಕ ಗಳಿಸಿದ್ದಾನೆ

ಆದರೆ, ಇದೇ ಚಿಕಿತ್ಸೆ ಅವನ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿದ್ದು, 13 ದಿನಗಳ ನಂತರ ಅವರು ಸಾವಿಗೀಡಾದನು.

ಚೀನಾದ ಹುವಾಂಗ್ ಎಂಬ ವ್ಯಕ್ತಿ, ಆಗಸ್ಟ್ 14ರಂದು ಯೋಂಗ್‌ಕಾಂಗ್ ಡ್ಯೂ ಡೆಂಟಲ್ ಆಸ್ಪತ್ರೆಯಲ್ಲಿ “ತಕ್ಷಣದ ಮರುಸ್ಥಾಪನೆ” ವಿಧಾನವನ್ನು ಅನುಸರಿಸಿದ ದಂತ ಚಿಕಿತ್ಸೆಗೆ ಒಳಗಾಗಿದ್ದರು.

ಈ ಶಸ್ತ್ರಚಿಕಿತ್ಸೆಯ ಭಾಗವಾಗಿ 23 ಹಲ್ಲುಗಳನ್ನು ತೆಗೆದು, 12 ಹೊಸ ಹಲ್ಲುಗಳನ್ನು ಅಳವಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಐದು ವರ್ಷಗಳ ಅನುಭವ ಹೊಂದಿದ್ದರು.

ಆದರೆ, ಈ ಚಿಕಿತ್ಸೆಯ ನಂತರ ಹುವಾಂಗ್ ಬಾಧೆ ಅನುಭವಿಸುತ್ತಿದ್ದರು, ಮತ್ತು 13 ದಿನಗಳ ಬಳಿಕ ಅವರು ಹಠಾತ್ ಹೃದಯಾಘಾತದಿಂದ ನಿಧನರಾದರು.

ಹಲ್ಲು ಚಿಕಿತ್ಸೆಯ ಪ್ರಕ್ರಿಯೆ ಮತ್ತು ಅವರ ಸಾವಿನ ನಡುವಿನ ಸಂಬಂಧವನ್ನು ಪರಿಶೀಲಿಸಲು ಆರೋಗ್ಯ ಆಯೋಗ ಆಳವಾದ ತನಿಖೆ ನಡೆಸುತ್ತಿದೆ.

ಆಸ್ಪತ್ರೆಯ ಪ್ರತಿಕ್ರಿಯೆ:
ಆಸ್ಪತ್ರೆಯ ವೈದ್ಯರು, ಹಲವಾರು ಹಲ್ಲುಗಳನ್ನು ಒಂದೇ ದಿನ ತೆಗೆದುಹಾಕಲು ರೋಗಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಾರೆ ಮತ್ತು ಅದಕ್ಕೆ ಅನುಸಾರವಾಗಿ ಚಿಕಿತ್ಸೆ ನಡೆಸುತ್ತಾರೆ ಎಂದು ವಿವರಿಸಿದ್ದಾರೆ.

ಸಾಮಾನ್ಯವಾಗಿ ಮುಂಭಾಗದ ಹಲ್ಲುಗಳನ್ನು ಮಾತ್ರ ಒಂದೇ ಸೆಷನ್‌ನಲ್ಲಿ ತೆಗೆದುಹಾಕುತ್ತಾರೆ, ಆದರೆ ಹುವಾಂಗ್ ಅವರ ಹಿಂದಿನ ಹಲ್ಲುಗಳನ್ನೂ ತಕ್ಷಣದ ಪ್ರಕ್ರಿಯೆಯಲ್ಲಿ ಕೈಗೊಂಡಿದ್ದಾರೆ.

ಮೃತ್ಯು ಕುರಿತು ತನಿಖೆ:
ಆಸ್ಪತ್ರೆ ಮತ್ತು ಸ್ಥಳೀಯ ಆರೋಗ್ಯ ಆಯೋಗವು ಘಟನೆ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದು, ಹಲ್ಲು ಚಿಕಿತ್ಸೆಯ ಪ್ರಕ್ರಿಯೆ ಮತ್ತು ಹುವಾಂಗ್ ಅವರ ಸಾವಿನ ನಡುವೆ ಯಾವುದೇ ನೇರ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸುತ್ತಿದೆ.

Follow For More Details

Leave a Comment

Your email address will not be published. Required fields are marked *

Scroll to Top