ಐಐಟಿ ಪದವೀಧರ, ಎಲನ್ ಮಸ್ಕ್‌ ನಿಂದ ಉದ್ಯೋಗ ಕಳೆದುಕೊಂಡ ಬಳಿಕ, ಸ್ವಂತ ಎಐ ಸಂಸ್ಥೆ ಸ್ಥಾಪಿಸಿದ ಪರಾಗ್ ಅಗರ್‌ವಾಲ್!

ಭಾರತದ ಐಐಟಿಗಳಲ್ಲಿ ಪದವಿ ಪಡೆದವರು ನಾನಾ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡುತ್ತಿದ್ದು, ಉದ್ಯೋಗಗಳನ್ನು ಮಾಡುವುದರ ಜೊತೆಗೆ ತಮ್ಮದೇ ಆದ ಕಂಪನಿಗಳನ್ನು ಸ್ಥಾಪಿಸಿ ಯಶಸ್ಸು ಸಾಧಿಸುತ್ತಿದ್ದಾರೆ.

ಈ ಹಾದಿಯಲ್ಲಿ ಮುನ್ನಡೆದ ಐಐಟಿ ಪದವೀಧರ ಪರಾಗ್ ಅಗರ್‌ವಾಲ್, ಟ್ವಿಟ್ಟರ್‌ನ ಸಿಇಒ ಸ್ಥಾನವನ್ನು ಹಾಸಿಲು ಮಾಡಿಕೊಂಡು, ವರ್ಷಕ್ಕೆ 100 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದರು.

18 ವರ್ಷದ ಸಮೋಸಾ ಮಾರಾಟಗಾರ NEET ಪರೀಕ್ಷೆಯಲ್ಲಿ 664 ಅಂಕ ಗಳಿಸಿದ್ದಾನೆ

ಇದರಲ್ಲಿ 8 ಕೋಟಿ ರೂ. ನಗದು ಸಂಬಳವಿತ್ತು, ಮತ್ತು 94 ಕೋಟಿ ರೂ. ಮೌಲ್ಯದ ಷೇರುಗಳೂ ಸಹ ಸೇರಿದ್ದು, ಅವರ ಆರ್ಥಿಕ ಯಶಸ್ಸನ್ನು ಮತ್ತಷ್ಟು ಬಲಪಡಿಸಿತು.

ಆದರೆ, ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ, ಇತರರಂತೆ ಪರಾಗ್ ಕೂಡ ಉದ್ಯೋಗ ಕಳೆದುಕೊಂಡರು. ಎಲಾನ್ ಮಸ್ಕ್ ಟ್ವಿಟ್ಟರ್‌ ಅನ್ನು ‘ಎಕ್ಸ್’ ಎಂದು ಪರಿವರ್ತಿಸಿದ್ದರು.

ಈ ಸಮಯದಲ್ಲಿ ತನ್ನ ಕಂಪನಿಯ ಉದ್ಯೋಗಿಗಳ ವಿಷಯದಲ್ಲಿ ಸಾಕಷ್ಡು ಕಠಿಣ ಕ್ರಮ ಕೈಗೊಂಡಿದ್ದರು.

ಇದರಿಂದ ಹಲವರಿಗೆ ಕೆಲಸ ಕಳೆದುಕೊಂಡ ಪರಿಸ್ಥಿತಿ ಉಂಟಾಗಿತ್ತು. ಪರಾಗ್, ಐಐಟಿಯಲ್ಲಿ ಆಲ್ ಇಂಡಿಯಾ 77ನೇ ರ್ಯಾಂಕ್‌ ಪಡೆದವರು, ಸಿಇಒ ಆಗಿ ಕೆಲಸ ಮಾಡುತ್ತಿದ್ದರು.

೮ ಕೋಟಿ ರೂಪಾಯಿ ವೇತನ ಮತ್ತು ೯೪ ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನೆಲ್ಲ ಲೆಕ್ಕ ಹಾಕಿದರೆ ಇವರ ವೇತನ ೧೦೦ ಕೋಟಿ ರೂಪಾಯಿ ತಲುಪುತ್ತದೆ.

ಟ್ವೀಟರ್‌ ಬಿಟ್ಟ ನಂತರ

ಪರಾಗ್ ಅಗರ್‌ವಾಲ್ ಅವರು ಟ್ವಿಟ್ಟರ್‌ನಲ್ಲಿ ಉದ್ಯೋಗ ಕಳೆದುಕೊಂಡ ನಂತರ, ಕಂಪನಿ ಅವರ 400 ಕೋಟಿ ರೂಪಾಯಿ ಪರಿಹಾರವನ್ನು ನೀಡಲು ವಿಳಂಬ ಮಾಡಿತ್ತು.

ಈ ಹಿನ್ನೆಲೆಯಲ್ಲಿ, ಅಗರ್‌ವಾಲ್ ಮತ್ತು ಇತರ ಉದ್ಯೋಗಿಗಳು ಎಲಾನ್ ಮಸ್ಕ್ ವಿರುದ್ಧ ಕಾನೂನು ಹೋರಾಟ ಆರಂಭಿಸಿದರು.

ಐಐಟಿ ಪದವೀಧರ, ಎಲನ್ ಮಸ್ಕ್‌ ನಿಂದ ಉದ್ಯೋಗ ಕಳೆದುಕೊಂಡ ಬಳಿಕ, ಸ್ವಂತ ಎಐ ಸಂಸ್ಥೆ ಸ್ಥಾಪಿಸಿದ ಪರಾಗ್ ಅಗರ್‌ವಾಲ್!

ಅವರು 1000 ಕೋಟಿ ರೂಪಾಯಿಗಿಂತಲೂ ಹೆಚ್ಚು ಪರಿಹಾರಕ್ಕೆ ಹಕ್ಕುದಾರರಾಗಿದ್ದಾರೆಂದು ಆರೋಪಿಸಿದರು.

ಟ್ವಿಟ್ಟರ್ ಉದ್ಯೋಗ ತೊರೆದ ನಂತರ, ಪರಾಗ್ ಎಐ (ಕೃತಕ ಬುದ್ಧಿಮತ್ತೆ) ಕ್ಷೇತ್ರದಲ್ಲಿ ಹೊಸ ಯೋಜನೆ ಆರಂಭಿಸಿದರು.

https://infomate.in/civil-psi-exam-question-paper-23rd-january-2024/

ವರದಿಗಳ ಪ್ರಕಾರ, ಈ ಹೊಸ ಉದ್ಯಮಕ್ಕೆ 246 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಎಐ ಡೆವಲಪರ್‌ಗಳಿಗೆ ಬೃಹತ್ ಭಾಷಾ ಮಾದರಿಗಳ ತಂತ್ರಜ್ಞಾನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿತವಾಗಿದೆ.

ಚಾಟ್‌ಜಿಪಿಟಿ ಹಿನ್ನೆಯ ತಂತ್ರಜ್ಞಾನದಂತೆಯೇ, ಈ ಹೊಸ ಯೋಜನೆಯು ಎಐನಲ್ಲಿ ಮಹತ್ವದ ಸಾಧನೆ ಮಾಡಲು ತಯಾರಾಗಿದೆ. ಖೋಸ್ಲಾ ವೆಂಚರ್ಸ್, ಓಪನ್‌ಎಐ ಮತ್ತು ಇತರ ಪ್ರಮುಖ ಹೂಡಿಕೆದಾರರು ಇವರ ಯೋಜನೆಯಲ್ಲಿ ಹೂಡಿಕೆ ಮಾಡಿದ್ದಾರೆ.

Leave a Comment

Your email address will not be published. Required fields are marked *

Scroll to Top