ಟೇರೆಸ್‌ ಮೇಲೆ ಹಾಕಿದ್ದ ಮಹಿಳೆಯರ ಒಳ ಉಡುಪು ಕಳ್ಳತನ ಮಾಡುವ ಕಾಮುಕ ಕಳ್ಳ

ಉತ್ತರಾಖಾಂಡ : ಇವನೆಂಥ ಕಾಮುಕ ಮರ್ರೆ. ಟೆರೆಸ್‌ ಮೇಲೆ ಹಾಕಿರುವ ಒಳ ಉಡುಪುಗಳನ್ನೇ ಟಾರ್ಗೆಟ್‌ ಮಾಡಿ ಅದನ್ನು ಮರೆ ಮಾಚಿ ಅದನ್ನು ಕದ್ದು ಹೊಗುತ್ತಿದ್ದ, ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು , ಮಹಿಳೆಯರು ಬೆಚ್ಚಿ ಬಿದ್ದಿದ್ದಾರೆ.

ಉತ್ತರಖಾಂಡದ ಉಧಮ್‌ ಸಿಂಗ್‌ ನಗರ ಜಿಲ್ಲೆಯಲ್ಲಿ ಯುವಕನೋಬ್ಬ ಹೆಣ್ಣು ಮಕ್ಕಳ ಒಳ ಉಡುಪುಗಳನ್ನು ಕದಿಇಯುವುದನ್ನೇ ಕಾಯಕ ಮಾಡಿಕೊಂಡಿದ್ದಾನೆ.

ಕಳೆದ ಕೆಲವು ದಿನಗಳಿಂದ ಟೆರೇಸ್‌ ಮತ್ತು ಮನೆಯ ಹೊರಗೆ ಒಣಗಲು ಹಾಕಿದ ಮಹಿಳೆಯರ ಒಳ ಉಡುಪುಗಳು ನಿರಂತರವಾಗಿ ಕಾಣೆಯಾಗುತ್ತಿದ್ದವು. ಈ ಬಗ್ಗೆ ದೂರುಗಳನ್ನು ನೀಡಿ ಹಲವು ಮಹಿಳೆಯರು ಪೋಲಿಸರ ಮೊರೆ ಹೋಗಿದ್ದರು. ಈ ವಿಷಯ ತಿಳಿದ ಪೊಲೀಸರಿಗೆ ಅಶ್ಚರ್ಯವಾಗಿತು. ಸಿಸಿಟಿವಿ ದೃಶ್ಯಯ ಸಹಾಯದಿಂದ ಪೋಲಿಸರು ಕಳ್ಳನಿಗಾಗಿ ಹುಡುಕಾಟ ಆರಂಭಿಸಿದರು.

ದಿನೇಶ್ ಪುರ ಪೋಲಿಸ್‌ ಠಾಣೆ ವ್ಯಾಪ್ತಿಯ ಉಧಮ್‌ ಸಿಂಗ್‌ ನಗರದ ಜಿಲ್ಲೆಯಲ್ಲಿ ಸಾಮಾಜಿಕ ಮಾದ್ಯಮಗಳಲ್ಲಿ ವೀಡಿಯೊ ವೈರಲ್‌ ಆಗುತ್ತಿದೆ. ಟೆರೇಸ್‌ ಮತ್ತು ಮನೆಯ ಹೊರಗೆ ಒಣಗಲು ಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದ್ದು , ಅದನ್ನು ಕೊಳಕು ಮಾಡಿ ಎಸೆಯುತ್ತಿರುವ ಯುವಕನೊಬ್ಬನ ಕೃತ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಪೋಲಿಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯುವಕನ್ನು ಗುರುತಿಸಿ ವಶಕ್ಕೆ ಪಡೆದಿದ್ದಾರೆ.

ಈ ರೀತಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿರುವ ವ್ಯಕ್ತಿಗೆ ಮಾನಸಿಕ ಆರೋಗ್ಯ ಚೆನ್ನಾಗಿಲ್ಲ ಎನ್ನಲಾಗುತ್ತಿದೆ. ಪ್ರತಿದಿನ ಮಹಿಳಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ ಎಂದು ಪೋಲಿಸರು ತಿಳಿಸಿದ್ದಾರೆ,

ಟೀಕೆಗಳಿಗೆ ಉತ್ತರ ಕೊಟ್ಟ ದೀಪಿಕಾ : ರಣವೀರ್‌ ಜೊತೆ ಬೇಬಿ ಬಂಪ್ಸ್‌ ಪೋಟೋಶೂಟ್‌

This Post is First Appeared on ಟೇರೆಸ್‌ ಮೇಲೆ ಹಾಕಿದ್ದ ಮಹಿಳೆಯರ ಒಳ ಉಡುಪು ಕಳ್ಳತನ ಮಾಡುವ ಕಾಮುಕ ಕಳ್ಳ AIN News

Scroll to Top