ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಡೀಪ್ ಫೇಕ್ ವೀಡಿಯೋ ವೈರಲ್: ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ ಅಭಿಮಾನಿಗಳು

ಕರ್ನಾಟಕ ರತ್ನ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವನ್ನು ಜನರನ್ನು ಇನ್ನು ಭಾದಿಸುತ್ತಿದ್ದೆ. ಅವರ ಸ್ಥಾನವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ತುಂಬುತ್ತಿದ್ದಾರೆ.

ಅಶ್ವಿನಿ ಅವರು ಎಲ್ಲ ಕಾರ್ಯಕ್ರಮಗಳಿಗೆ ಭಾಗಿಯಾಗುತ್ತಿದ್ದರು. ಇದುವರೆಗೂ ಯಾರೊಬ್ಬರ ಬಗ್ಗೆನೂ ಕೆಟ್ಟದಾಗಿ ಮಾತನಾಡದೆ ಇರುವ ಅಶ್ವಿನಿ ಅವರ ಡೀಪ್ ಫೇಕ್ ವೀಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

17ನೇ ಆವೃತಿ ಐಪಿಎಲ್ ಆರಂಭಕ್ಕೂ ಮುನ್ನ ಅರ್ಸಿಬಿ ಜೆರ್ಸಿ ಅನಾವರಣದ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಫ್ರಾಂಚಿಸ್ ಅವರ ಕಡೆಯಿಂದ ವಿಶೇಷ ಗೌರವ ಸಿಕ್ಕಿತ್ತು . ಇದಾದ ಬಳಿಕ ನಡೆದ ಪಂದ್ಯಗಳಲ್ಲಿ ಆರ್ ಸಿಬಿ ಸತತವಾಗಿ ಪಂದ್ಯ ಸೋಲುಗಳನ್ನು ಕಂಡಿತು.ಅಶ್ವಿನಿ ಅವರು ಜೆರ್ಸಿ ಲಾಂಚ್ ಮಾಡಿದ್ದೆ ಕಾರಣ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು.

ಯೋಗೇಂದ್ರ ಪ್ರಸಾದ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದ್ದು ಗಂಡ ಸತ್ತ ಮು** ಅಶ್ವಿನಿಗೆ ಬಾಳು ಕೊಡಲು ನಿರ್ಧರಿಸಿದ್ದೇನೆ. ದಿನಾಂಕ 29/09/2024 ರಂದು ನಾನು ವಿವಾಹವಾಗಲಿದ್ದೇನೆ. ದಯವಿಟ್ಟು ಅಪ್ಪು ಬಾಸ್ ಹಾಗೂ ರಾಜವಂಶ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ಸವಿಸವಿ ಆಮಂತ್ರಣ . ಸ್ಥಳ: ಕಂಠೀರವ ಸ್ಟುಡಿಯೋಸ್, ನಾರ್ಥ್ ವೆಸ್ಟ್ ಬೆಂಗಳೂರು. ಎಂದು ಬರೆಯಲಾಗಿದೆ.

ಯೋಗೇಂದ್ರ ಪ್ರಸಾದ್ ಅವರ ಖಾತೆಯನ್ನು 100 ಜನ ಫಾಲೋ ಮಾಡುತ್ತಿದ್ದು ರಾಜವಂಶ ಅಭಿಮಾನಿ ಹಾಗೂ ಚಿತ್ರನಟ ಹಾಗೂ ರಾಷ್ಟ್ರೀಯ ಭ್ರಷ್ಟಚಾರದ ವಿರೋಧಿ ಬನ್ನಿಪೇಟೆ ಎಂದು ಬಯೊದಲ್ಲಿ ಹಾಕಿಕೊಂಡಿದ್ದಾನೆ. ಡೀಪ್ ಫೇಕ್ ವೀಡಿಯೋ ನೋಡಿದ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

Scroll to Top