ಜೋಗಿ ಸಿನಿಮಾದ ನಟಿ ಜೆನಿಫರ್ ಕೊತ್ವಾಲ್ ಈಗ ಹೇಗೆ ಇದ್ದಾರೆ, ಎಲ್ಲಿ ಇದ್ದಾರೆ ಗೊತ್ತಾ?

ಜೆನಿಫರ್ ಕೊತ್ವಾಲ್ ಅವರು ಮಾಡೆಲ್ ಆಗಿ ನಟಿಯಾಗಿದ್ದರು, ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದರು.ಈ ನಟಿ 15 ರ ವಯಸ್ಸಿನಲ್ಲಿ ಜಾಹೀರಾತು ಕ್ಷೇತ್ರಕ್ಕೆ ಪಾದರ್ಪನೆ ಮಾಡಿ ಕ್ಲೋಸ್ ಅಫ್ ಟೂತ್ ಪೇಸ್ಟ್ ಆಡ್ ನಲ್ಲಿ ಕಾಣಿಸಿಕೊಂಡಿದ್ದರು.

ಜಾಹೀರಾತಿನ ನಂತರ ಸಾಲು ಸಾಲಿನಲ್ಲಿ ಜಾಹೀರಾತಿನ ಅವಕಾಶಗಳು ಬಂದವು. ಆಗ ನಿರ್ದೇಶಕ ಪ್ರೇಮ್ ಅವರ ಕಣ್ಣಿಗೆ ಬಿದ್ದರು ಜೆನ್ನಿಫರ್ ಕೊತ್ವಾಲ್ ಅವರು. ಜೋಗಿ ಸಿನಿಮಾದ ನಂತರ ಕನ್ನಡದಲ್ಲಿ ಯುಗಾದಿ, ಶ್ರೀ, ಮಸ್ತಿ , ಸತ್ಯವಾನ್ ಸಾವಿತ್ರಿ, ಲವಕುಶ, ನೀ ಬಿರ್ಲಾ ನಾ ಟಾಟಾ, ಈ ಬಂಧನ, ಹೀಗೆ ಸಾಲು ಸಾಲಿನಲ್ಲಿ ಉತ್ತಮ ಸಿನಿಮಾಗಳನ್ನು ನೀಡಿದ್ದರು

ಸ್ಯಾಂಡಲ್ವುಡ್ ಗೆ ಮಾಡೆಲ್ ಕ್ಷೇತ್ರದಿಂದ ಸಿನಿಮಾರಂಗಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ ಮೊದಲ ಸಿನಿಮಾದಿಂದ ಜನರ ಮನ ಗೆದಿದ್ದರು.

ಇದೀಗ ಜೆನಿಫರ್ ಅವರಿಗೆ 40 ವರ್ಷ ವಯಸ್ಸು . ಅವರಿಗೆ ಡಿಸ್ಕ್ ಇಂಜುರಿ ಆಗಿರುವುದರಿಂದ ವರ್ಕೌಟ್ ಮಾಡಲು ಆಗದೇ ಬ್ಯೂಟಿಯನ್ನು ನೋಡಿಕೊಳ್ಳಲು ಆಗದೆ ಸಿನಿಮಾದಿಂದ ದೂರ ಉಳಿದಿದ್ದಾರೆ.

Images credit to jenefir Kotwal office account

2011ರಲ್ಲಿ ತೆರೆಕಂಡ ” ಮತ್ತೊಂದು ಮದುವೆನಾ ” ಕನ್ನಡ ಚಿತ್ರದಲ್ಲಿ ನಟಿಸಿದ ನಂತರ ಮತ್ತೆ ಯಾವುದೇ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಕನ್ನಡ ನಂತರ ತೆಲುಗು ಚಿತ್ರ “ಮನಸೆoಟೇ ಚಾಲು”, ನಾಗ ” ಸಿನಿಮಾದಲ್ಲಿ ನಟಿಸಿದರು. ಆದರೆ ಆ ಸಿನಿಮಾ ಕೈ ಹಿಡಿಯಲಿಲ್ಲ. ನಂತರ 2014ರಲ್ಲಿ ಹಿಂದಿ ಟಿವಿ ಶೋ “ಓ ಮೈ ಗೋಲ್ಡ್ ” ನಲ್ಲಿ ಭಾಗವಹಿಸಿದ್ದರು. ಅದರ ನಂತರ ಸಿನಿಮಾರಂಗಕ್ಕೆ ವಾಪಸ ಆಗಲಿಲ್ಲ.

ಐಟಂ ಸಾಂಗ್ ಮತ್ತು ಅತಿಥಿ ಪಾತ್ರದಲ್ಲಿ ನಟಿಸುವ ಅವಕಾಶ ಬಂದರು ಅದನ್ನು ತಿರಸ್ಕರಿಸುತ್ತಾ ಬಂದಿದ್ದಾರೆ. ಸದ್ಯ ತಮ್ಮದೇ ಪ್ರಪಂಚದಲ್ಲಿ ಬ್ಯುಸಿಯಾಗಿರುವ ನಟಿ ಮುಂಬೈನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಇದ್ದಾರೆ .

Scroll to Top