ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಿಹಿ ಸುದ್ದಿ : ಈ ಭಾಗದಲ್ಲಿ ಹೊರಡಲಿದೆ ವಿಶೇಷ ರೈಲು.

ಬೆಂಗಳೂರು : ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ಭುವನೇಶ್ವರ – ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ ಮಾಡಲಿದೆ. ಅಲ್ಲದೇ ಕೃಷ್ಣ ರಾಜಪುರಂನಲ್ಲಿ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲುಗಳ ಸಮಯ ಪರಿಷ್ಕರಣೆ ಮಾಡಲಾಗಿದೆ.

ಗೌರಿ – ಗಣೇಶ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ ನೀಡಲಾಗಿದೆ. ಹಬ್ಬದ ಸಮಯದಲ್ಲಿ ಊರಿಗೆ ಹೋಗುವವರ ಸಂಖ್ಯೆ ಹೆಚ್ಚು ಇರುತ್ತದೆ ಎಂಬುವುದನ್ನು ಮನಗಂಡ ರೈಲ್ವೆ ಇಲಾಖೆಯು ಭುವನೇಶ್ವರ – ಬೆಳಗಾವಿ ನಡುವೆ ವಿಶೇಷ ರೈಲು ( ರೈಲು ಸಂಖ್ಯೆ 02812/02814) ಸೇವೆಯನ್ನು ನೀಡಲು ಮುಂದಾಗಿದೆ.

ರೈಲು ಸಂಖ್ಯೆ 02813 : ಈ ರೈಲು ಸೆಪ್ಟಂಬರ್‌ 7, 14, 21 ಮತ್ತು 28 , ರಂದು ಪ್ರತಿ ಶನಿವಾರ ಭುವನೇಶ್ವರದಿಂದ ಸಾಯಂಕಾಲ 7;15 ಗಂಟೆಗೆ ಹೊರಟು, ಸೋಮವಾರ ಬೆಳಗಿನ ಜಾವ 3:00 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸಲಿದೆ.

ಇವರೇ ನೋಡಿ ಕನ್ನಡ ಬಿಗ್ ಬಾಸ್‌ ಸೀಸನ್‌ 11ರ ಸ್ಫರ್ಧಿಗಳು

ಹಿಂದಿರುಗುವ ದಿಕ್ಕಿನಲ್ಲಿ , ರೈಲು ಸಂಖ್ಯೆ 02814 : ಈ ರೈಲು ಸೆಪ್ಟೆಂಬರ್‌ 9, 16 , 23 ಮತ್ತು 30 ರಂದು ಪ್ರತಿ ಸೋಮವಾರ ಬೆಳಗಾವಿಯಿಂದ ಬೆಳಗ್ಗೆ 7;30 ಗಂಟೆಗೆ ಹೊರಟು ಮಂಗಳವಾರ ಮಧ್ಯಾಹ್ನ 02 :30 ಗಂಟೆಗೆ ಭುವನೇಶ್ವರವನ್ನು ತಲುಪಲಿದೆ.

ಮಾರ್ಗದಲ್ಲಿ ಈ ರೈಲು ಖುರ್ದಾ ರೋಡ್‌ , ಬ್ರಹ್ಮಪುರ ,ಪಲಾಸ ,ಶ್ರೀಕಾಕುಳಂ ರೋಡ ,ವಿಜಯನಗರಂ,ಪೆಂಡುರ್ತಿ, ದುವ್ವಾಡ, ರಾಜಮಂಡ್ರಿ, ಎಲೂರು,ವಿಜಯವಾಡ, ಗುಂಟೂರು, ನಂದ್ಯಾಳ,ಧೋನೆ, ಗಂತಕಲ್‌, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಮುನಿರಾಬಾದ್‌, ಕೊಪ್ಪಳ, ಗದಗ, ಹುಬ್ಬಳ್ಳಿ , ಧಾರವಾಡ, ಅಳ್ನಾವರ ಮತ್ತು ಲೋಂಡಾ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ರೈಲು 16 ಎಸಿ – 3 ಟೈಯರ್‌ ಗಳನ್ನು ಬೋಗಿಗಳು ಮತ್ತು ಎರಡು ಬ್ರೇಕ್‌ / ಲಗೇಜ್‌ ಕಮ್‌ ಜನರೇಟರ್‌ ಕಾರುಗಳನ್ನು ಒಳಗೊಂಡಿರುತ್ತದೆ.

ವಂದೇ ಭಾರತ್‌ ಎಕ್ಸ್ ಪ್ರೆಸ್‌ ರೈಲುಗಳ ಸಮಯ ಪರಿಷ್ಕರಣೆ

ಮಧುರೈ – ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣಗಳ ನಡುವೆ ವಾರಕ್ಕೆ ಆರು ದಿನ ಸಂಚರಿಸುವ ವಂದೇ ಭಾರತ್‌ ಎಕ್ಸ್ ಪ್ರೆಸ್‌ ರೈಲು ವೇಳಾಪಟ್ಟಿಯನ್ನು ಕೃಷ್ಣರಾಜಪುರಂ ನಿಲ್ದಾಣದಲ್ಲಿ ಈ ಕೆಳಗಿನಂತೆ ಪರಿಷ್ಕರಣೆ ಮಾಡಲಾಗುತ್ತಿದೆ.

1.ಸೆಪ್ಟೆಂಬರ್‌ 5. ರಿಂದ ಜಾರಿಗೆ ಬರುವಂತೆ , ರೈಲು ಸಂಖ್ಯೆ20671 ಮಧುರೈ – ಬೆಂಗಳೂರು ಕಂಟೋನ್ಮೆಂಟ್‌ ವಂದೇ ಭಾರತ್‌ ಎಕ್ಸ್‌ ಪ್ರೆಸ್‌ ರೈಲು12:50/ 12:52 ಗಂಟೆಯ ಬದಲು12:30/12 :32 ಗಂಡೆಗೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಿ /ನಿರ್ಗಮಿಸಲಿದೆ.

2. ಸಪ್ಟೆಂಬರ್‌ 15, 2024 ರಿಂದ ಜಾರಿಗೆ ಬರುವಂತೆ , ರೈಲು ಸಂಖ್ಯೆ 20672 ಬೆಂಗಳೂರು ಕಂಟೋನ್ಮೆಂಟ್‌ – ಮದುರೈ ವಂದೇ ಭಾರತ್ ಎಕ್ಸ್ ಪ್ರೆಸ್‌ ರೈಲು 13:55 / 13:57 ‌ ಗಂಟೆಯ ಬದಲು 13:43/13:45 ಗಂಟೆಗೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಿ / ನಿರ್ಗಮಿಸಲಿದೆ.

ಮಗನನ್ನು ಹಲ್ಲೆ ಮಾಡುತ್ತಿದ್ದ ಡಾಕ್ಟರ್‌ : ಮಗನನ್ನು ಬಿಟ್ಟು ಬಿಡಿ ಎಂದು ಗೋಳಾಡಿದ ತಾಯಿ

ಟೇರೆಸ್‌ ಮೇಲೆ ಹಾಕಿದ್ದ ಮಹಿಳೆಯರ ಒಳ ಉಡುಪು ಕಳ್ಳತನ ಮಾಡುವ ಕಾಮುಕ ಕಳ್ಳ

Scroll to Top