ವಿಚ್ಛೇದನದ ವದಂತಿಗಳಿಗೆ ತೆರೆ ಎಳೆದ ಜಗಪ್ಪ-ಸುಶ್ಮಿತಾ ದಂಪತಿ

ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ರಿಯಾಲಿಟಿ ಶೋ ಬಗ್ಗೆ ನೀವು ಕೂಡಾ ಕೇಳಿ ತಿಳಿದಿದ್ದೀರಾ. ಈ ಶೋ ಮೂಲಕ ಹಲವಾರು ಕಲಾವಿದರು ತಮ್ಮ ಕಲೆ ಮತ್ತು ಪ್ರತಿಭೆಯನ್ನು ಜನರ ಮುಂದೆ ಪ್ರದರ್ಶಿಸಲು ಅವಕಾಶ ಪಡೆದಿದ್ದಾರೆ. ಈ ವೇದಿಕೆ ಕೆಲವು ಕಲಾವಿದರು ತಮ್ಮ ಜೀವನದಲ್ಲಿ ಮುನ್ನಡೆಯಲು ಕಾರಣವಾಗಿದೆ.

ಈ ಶೋನಲ್ಲಿ ಜಗಪ್ಪ ಮತ್ತು ಸುಶ್ಮಿತಾ ಎಂಬ ಜೋಡಿ ಜನಪ್ರಿಯರಾಗಿದ್ದರು. ಇಬ್ಬರೂ ಬೇರೆ ಊರಿನವರಾದರೂ, ಈ ಶೋ ಅವರನ್ನು ಒಂದು ಮಾಡಿತ್ತು. ವೇದಿಕೆಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಇವರು, ನಿಜ ಜೀವನದಲ್ಲಿಯೂ ಜೋಡಿ ಎಂದು ಜನರು ಅಭಿಪ್ರಾಯಪಟ್ಟಿದ್ದರು. ಇವರಿಬ್ಬರ ಮೇಲೆ ಲವ್ ಮಾಡುತ್ತಿದ್ದಾರೆ ಎಂಬ ಮಾತು ಸಾಕಷ್ಟು ಬಾರಿ ಕೇಳಿಬಂದಿತ್ತು. ಆದರೆ, ಅವರಿಬ್ಬರೂ ಅವುಗಳಿಗೆ ಪ್ರತಿಸ್ಪಂದನೆ ನೀಡದೇ, ಇಂತಹ ವಿಷಯಗಳನ್ನು ತಳ್ಳಿ ಹಾಕುತ್ತಿದ್ದರು.

ವಿಚ್ಛೇದನದ ವದಂತಿಗಳಿಗೆ ತೆರೆ ಎಳೆದ ಜಗಪ್ಪ-ಸುಶ್ಮಿತಾ ದಂಪತಿ

ಆದರೆ, ಈ ವರ್ಷ ಜನವರಿಯಲ್ಲಿ, ಜಗಪ್ಪ ಮತ್ತು ಸುಶ್ಮಿತಾ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ವೇಳೆ ಇವರಿಬ್ಬರಿಗೂ ಸಿನಿ ಕ್ಷೇತ್ರದಿಂದ ಬೆಂಬಲ ದೊರೆತಿದ್ದು, ಹಲವಾರು ಸಿನಿಮಾಗಳಲ್ಲಿ ಅವಕಾಶಗಳು ಬಂದಿವೆ, ಮತ್ತು ಇವರಿಬ್ಬರೂ ಈಗ ಬ್ಯುಸಿಯಾಗಿದ್ದಾರೆ.

ಇದಕ್ಕೂ ಮುನ್ನ, ಮಾಂಗಲ್ಯ ಧರಿಸದೇ ಇದ್ದ ಕಾರಣಕ್ಕೆ ಸುಶ್ಮಿತಾ ಟ್ರೋಲ್‌ಗಳಿಗೆ ಗುರಿಯಾಗಿದ್ದರು. ಆದರೆ, ಆ ಟ್ರೋಲ್‌ಗಳಿಗೆ ಅವರು ತಮ್ಮ ಉತ್ತರವನ್ನು ಗೌರಿ-ಗಣೇಶ ಹಬ್ಬವನ್ನು ಕುಟುಂಬದವರ ಜೊತೆ ಆಚರಿಸಿದ ವಿಡಿಯೋವನ್ನು ಶೇರ್ ಮಾಡಿ ಕೊಟ್ಟಿದ್ದಾರೆ. ಹಬ್ಬದ ಸಂಭ್ರಮವನ್ನು ಅವರ ಕುಂಟುಂಬದ ಜೊತೆ ಆಚರಿಸಿಕೊಂಡಿದ್ದು ಅಭಿಮಾನಿಗಳು ಜಗ್ಗಪ್ಪ ಜೊತೆಗೆ ಇರುವುದನ್ನು ನೋಡಿ ಖುಷಿಪಟ್ಟಿದ್ದಾರೆ. ಹೀಗೆ ಫ್ಯಾಮಿಲಿ ಜೊತೆ ಖುಷಿಯಾಗಿರಿ ಎಂದು ಕಮೆಂಟ್‌ ಮಾಡಿದ್ದಾರೆ.

Follow For More Details

Scroll to Top