ದಿಲೀಪ್ ರಾಜ್ ಅಭಿನಯದ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ಮಲೈಕಾ. ಈಗಲೂ ಕೂಡ ಎಡವಟ್ಟು ಲೀಲಾ ಎಂದು ಈಗಲೂ ಗುರುತಿಸುತ್ತಾರೆ. ಹಿಟ್ಲರ್ ಕಲ್ಯಾಣದ ನಂತರ ಕಿರುತೆರೆಗೆ ಮತ್ತೆ ಕಾಲಿಡಲಿಲ್ಲ. ಉಪಾಧ್ಯಕ್ಷ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿದರು. ಚಿಕ್ಕಣ್ಣ ಎದುರು ನಟಿಸುವುದರ ಮೂಲಕ ತಮ್ಮ ಅಭಿನಯದಿಂದ ಜನರ ಮನ ಗೆದ್ದರು.
ಇನ್ನು ಟಗರು ಪಲ್ಯ ಸಿನಿಮಾ ಖ್ಯಾತಿಯ ನಾಗಭೂಷಣ ಜೊತೆ ವಿದ್ಯಾಪತಿ ಸಿನಿಮಾದಲ್ಲಿ ಬ್ಯುಸಿ ಆಗಿರುವ ಮಲೈಕಾ ಅವರು ಟ್ರಯಲ್ ಟ್ರೆಡಿಷನಲ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಮಲೈಕಾ ಅವರು ಟ್ರೆಡಿಶನಲ್ ಡ್ರೆಸ್ ಗೆ ಮಾರ್ಡನ್ ಲುಕ್ನ ಟಚ್ ನೀಡಿದ್ದಾರೆ. ಮಲೈಕಾ ಅವರು ಕೆಂಪು ಬಣ್ಣದ ಬಾರ್ಡರ್ ,ಐವರಿ ಬಣ್ಣದ ಗೋಲ್ಡನ್ ಡಿಸೈನ್ ಸೀರೆಯುಟ್ಟಿದ್ದು, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ.
ಮಲೈಕಾ ಈಗ ನೀತಾ ಶಂಕರ್ ಅವರ ಬಳಿ ಪೋಟೋಶೂಟ್ ಮಾಡಿಸಿದ್ದಾರೆ.ಹೊಸ ಪೋಟೋಶೂಟ್ ಮೂಲಕ ಎಲ್ಲರ ಕಣ್ಣನ ಸೆಳೆಯುತ್ತಿದ್ದಾರೆ.ಸದ್ಯಕ್ಕೆ ಮಲೈಕಾ ಅವರ ಪೋಟೋಗಳಿಗೆ ಅಭಿಮಾನಿಗಳು ಕ್ಲೀನ್ ಬೊಲ್ಡ್ ಆಗಿದ್ದಾರೆ. ಬೋಲ್ಡ್ ಬ್ಯೂಟಿ , ಸ್ಟನ್ನಿಂಗ್ ಲುಕ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಸದ್ಯಕ್ಕೆ ಮಲೈಕಾ ಧಾರಾವಹಿಗಳಿಗಿಂತ ಸಿನಿಮಾರಂಗದ ಕಡೆಗೆ ಮುಖ ಮಾಡಿದ್ದಾರೆ. ಹೊಸ ಪೋಟೋಶೂಟ್ ಮೂಲಕ ಮಿರ ಮಿರ ಮಿಂಚಿದ್ದಾರೆ. ಮುಂದೆ ಕನ್ನಡ ಚಿತ್ರರಂಗದಲ್ಲಿ ಉತ್ತಮವಾದ ಅವಕಾಶಗಳು ಸಿಗುವ ಭರವಸೆಯಲ್ಲಿ ಕೂಡ ಮಲೈಕಾ ಇದ್ದಾರೆ. ಅಂದ್ಹಾಗೇ ಮಲೈಕಾ ಅಭಿನಯದ ಎರಡನೇ ಚಿತ್ರ ವಿದ್ಯಾಪತಿಗೆ ಡಾಲಿ ಧನಂಜಯ ಬಂಡವಾಳ ಹೂಡುತ್ತಿದ್ದಾರೆ. ಮೊನ್ನೆಯಷ್ಟೇ ಪುಟ್ಟದಾದ ಟೀಸರ್ ಮೂಲಕ ಗಮನ ಸೆಳೆದಿದ್ದಾರೆ.