ಬಿಗ್‌ಬಾಸ್‌ಗೆ ಬರಲು ನನಗೂ ಒಂದು ಚಾನ್ಸ್‌ ಕೊಡಿ ಎಂದು ಬೇಡಿಕೊಳ್ಳುತ್ತಿರುವ ಮಂಜಣ್ಣ

Highlights : ” ಬಿಗ್‌ ಬಾಸ್‌ ನಲ್ಲಿ ನನಗೂ ಒಂದು ಆಫರ್‌ ಕೊಡಿ , ಅಗ್ರಿಮೆಂಟ್‌ ಪೇಪರ್‌ ಮೇಲೆ ಸಹಿ ಹಾಕ್ತೀನಿ ನನ್ನಲ್ಲಿ ಸ್ವಾರ್ಥವಿಲ್ಲ ಎಂದು ಬೇಡಿಕೊಳ್ಳುತ್ತಿರುವ ಮಂಜಣ್ಣ.

ಇತ್ತೀಚಿನ ದಿನಗಳಲ್ಲಿ ಸಾಮಾನ್ಯರು ತಮ್ಮಲ್ಲಿರುವ ಪ್ರತಿಭೆಯನ್ನು ವ್ಯಕ್ತಪಡಿಸಲು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಇನ್‌ಸ್ಟಾಗ್ರಾಂ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಮತ್ತು ಬ್ಲಾಗ್ ಮೂಲಕ ತಮ್ಮ ಜನಪ್ರಿಯತೆಯನ್ನು ಗಳಿಸುತ್ತಿದ್ದಾರೆ. ಮೊಬೈಲ್‌ನಲ್ಲಿಯೇ ತಮ್ಮ ಕ್ರಿಯಾಶೀಲತೆ, ಪ್ರತಿಭೆ ಪ್ರದರ್ಶಿಸಿದ ಕೆಲವರು ಈಗ ಟೀವಿ ಸೀರಿಯಲ್‌ಗಳು, ರಿಯಾಲಿಟಿ ಶೋಗಳು, ಹಾಗು ಸಿನಿಮಾಗಳಲ್ಲಿಯೂ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಈ ಮಧ್ಯೆ, ಮಂಜಣ್ಣ ತಮ್ಮ ವೀಡಿಯೋ ಮೂಲಕ ಅಪರೂಪದ ಮನವಿ ಮಾಡಿದ್ದು, ತಮ್ಮಲ್ಲಿರುವ ಪ್ರತಿಭೆಗೆ ಒಂದು ಅವಕಾಶ ಕೊಡುವಂತೆ ಕೇಳಿಕೊಂಡಿದ್ದಾರೆ. “ನನಗೂ ಒಂದು ಆಫರ್ ನೀಡಿ, ಒಂದು ಚಾನ್ಸ್ ಬೇಕು” ಎಂದು ಮಂಜಣ್ಣ ತಮ್ಮ ಮನವಿಯನ್ನು ವಿಡಿಯೋದಲ್ಲಿ ವ್ಯಕ್ತಪಡಿಸಿದ್ದಾರೆ.

ಮಂಜಣ್ಣ, ವಿಶೇಷವಾಗಿ ರೀಲ್ಸ್‌ನಲ್ಲಿ ಬಹಳ ಜೋರಾಗಿ ಕಿರುಚಿ ನಟಿಸುತ್ತಿರುವುದಕ್ಕಾಗಿ ಪ್ರಖ್ಯಾತರಾಗಿದ್ದಾರೆ. ಅವರು ಬಿಗ್ ಬಾಸ್ ಹೌಸ್‌ಗೆ ಸೇರಿಸಬೇಕೆಂದು ಒತ್ತಾಯಿಸಿದ್ದಾರೆ. “ನಾನು ಎರಡು ಮಾತು ಹೇಳಬೇಕು… ನನ್ನಲ್ಲಿ ಸ್ವಾರ್ಥ ಇಲ್ಲ. ನನಗೆ ಬಿಗ್ ಬಾಸ್‌ಗೆ ಕರೆದುಕೊಂಡು ಹೋಗಿ ಸರ್, ನಾನು ಬಹಳ ಓಪನ್ ಆಗಿ ಮಾತನಾಡುತ್ತೇನೆ, ಅದಕ್ಕಾಗಿ ಬಿಗ್ ಬಾಸ್‌ಗೆ ಕರೆದೊಯ್ಯಿರಿ” ಎಂದು ಅವರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಅವರ ವಿಡಿಯೋದಲ್ಲಿ ಅವರು ಮುಂದುವರಿಯುತ್ತಾ, “ಸಮುದ್ರದಲ್ಲಿ ಎಷ್ಟೋ ಜನ ನೀರು ಪಾಲಾಗುತ್ತಿದ್ದಾರೆ, ಅವರಿಗೆ ನಾನು ಸಹಾಯ ಮಾಡಬೇಕು ಅನ್ನೋ ಆಸೆ ಇದೆ. ಅನಾಥಾಶ್ರಮಗಳಲ್ಲಿ ಅಣ್ಣ-ತಮ್ಮಂದಿರು, ಅಮ್ಮ-ಅಪ್ಪ ಇದ್ದಾರೆ, ಅವರಿಗೆ ಊಟದ ಸಹಾಯ ಮಾಡಬೇಕು ಅನ್ನೋದು ನನ್ನ ಕನಸು. ಎಷ್ಟು ಅನಾಥಾಶ್ರಮಗಳು ಇವೆ, ಎಲ್ಲರಿಗೂ ನಾನು ಸಹಾಯ ಮಾಡಬೇಕು ಅನ್ನೋ ಆಸೆ ಇದೆ. ನನಗೆ ದುಡ್ಡು ಬೇಕು ಸರ್, ಆದರೆ ಜೀವನಕ್ಕೆ ತಗಲಿದೆಷ್ಟು ಮಾತ್ರ. ನಾನು ಬಿಗ್ ಬಾಸ್ ಗೆದ್ದರೂ, ಹೆಚ್ಚು ಹಣ ಬೇಡ, ಅಗ್ರಿಮೆಂಟ್ ಪೇಪರ್‌ನಲ್ಲಿ ಸೈನ್ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.

ಈ ಮೂಲಕ ಮಂಜಣ್ಣ ತಮ್ಮ ಸಾಧು ಮನೋಭಾವವನ್ನು ಹಾಗೂ ಸಮಾಜ ಸೇವೆಯ ಆಸೆಗಳನ್ನು ಬಿಗ್ ಬಾಸ್ ವೇದಿಕೆಯ ಮೂಲಕ ಪೂರ್ಣಗೊಳಿಸಲು ಅವಕಾಶವಿತ್ತಂತೆ ಮನವಿ ಮಾಡಿದರು.

ಈ ಸಲ ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ ಯಾರು ಯಾರ್‌ ಆಗಮಿಸುತ್ತಾರೆ ಅನ್ನೋದು ಕುತೂಹಲಕಾರಿಯಾಗಿಯೇ ಉಳಿದಿದೆ. ಯಾರೂ ಹೋಸ್ಟ್‌ ಮಾಡುತ್ತಾರೆ ಅನ್ನೋದು ಕೂಡ ಸಸ್ಪೆನ್ಸ್‌ ಆಗಿಯೇ ಉಳಿದಿದೆ.

ಹೆಚ್ಚಿನ ಮಾಹಿತಿಗಾಗಿ ಫೋಲೋ ಮಾಡಿ

Scroll to Top