ಮನುಷ್ಯರಷ್ಟೇ ಅಲ್ಲ: ಹಾವು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತದೆ – ವೈರಲ್‌ ವೀಡಿಯೋ

ನವದೆಹಲಿ : ಹಾವು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೀವು ಎಂದಾದರೂ ನೋಡಿದ್ದೀರಾ ? ಹಾವುಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ ? ಇತ್ತೀಚೆಗೆ ಹಾವೊಂದು ಆತ್ಮಹತ್ಯೆ ಮಾಡಿಕೊಂಡಿದೆ. ಈ ಕುರಿತಾದ ಪೋಟೋ ವೈರಲ್‌ ಆಗಿದೆ.

ಈ ಚಿತ್ರದಲ್ಲಿ ಹಾವು ಸ್ವತ: ಸತ್ತಿಕೊಂಡು ೧೦ ನಿಮಿಷಗಳ ನಂತರ ಕೊನೆಯುಸಿರೆಳೆದಿದೆ.

ಗಂಡನಿಗೆ ವೀಡಿಯೋ ಕಾಲ್‌ ಮಾಡಿ ಸೂಸೈಡ್‌ ಮಾಡಿಕೊಂಡ ಹೆಂಡತಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಈ ಪೋಟೋದಲ್ಲಿ ಹಾವೊಂದು ಸುತ್ತಿಕೊಂಡಿರುವುದನ್ನು ಕಾಣಬಹುದು. ಹಾವು ತನ್ನ ಬಾಲದಿಂದ ಬಾಯಿ, ಕತ್ತನ್ನು ಬಿಗಿಯಾಗಿ ಹಿಡಿದಿತ್ತು.

ಈ ಹಾವು ಆತ್ಮಹತ್ಯೆ ಯತ್ನಸಿದ ೧೦ ನಿಮಿಷಗಳ ನಂತರ ಕತ್ತು ಹಿಸುಕಿ ಸಾವನ್ನಪ್ಪಿದೆ ಎಂದು ಪೋಟೋ ಶೇರ್‌ ಮಾಡಿದವರು ಹೇಳುತ್ತಿದ್ದಾರೆ.

ಮನುಷ್ಯರು ಮಾತ್ರವಲ್ಲ : ಹಾವು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತದೆ.ವೀಡಿಯೋ ವೈರಲ್‌
ಹಾವು ಸೂಸೈಡ್‌ ಮಾಡಿಕೊಳ್ಳುತ್ತಿರುವುದನ್ನು ನೋಡಿ ಬೆಚ್ಚಿಬಿದ್ದ ಜನರು

ಆದರೆ, ವೈಜ್ಞಾನಿಕವಾಗಿ ಹಾವುಗಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸಾಮಾನ್ಯವಾಗಿ, ಹಾವುಗಳು ಇಂತಹ ಕೆಲಸವನ್ನು ವೈಚಾರಿಕವಾಗಿ ಮಾಡುವುದಿಲ್ಲ. ಇದು ಕೆಲವು ವಿಶೇಷ ಸಂದರ್ಭಗಳಲ್ಲಿ ಶಾರೀರಿಕ ಅಥವಾ ಮನೋವಿಕಾರಿಕ ಒತ್ತಡದಿಂದ ಆಗಬಹುದು. ಉದಾಹರಣೆಗೆ, ಎಚ್ಚರಿಕೆ ಸ್ಥಿತಿಯಲ್ಲಿ ಅಥವಾ ಕೆಲವೊಮ್ಮೆ ನೋವು, ಆಘಾತ ಅಥವಾ ತೀವ್ರ ಅತಿಶ್ರಮದ ಸಂದರ್ಭಗಳಲ್ಲಿ, ಹಾವುಗಳು ತಪ್ಪಾಗಿ ತಮ್ಮನ್ನು ತಾವು ಹಾನಿಗೊಳಪಡಿಸಬಹುದು.

ಈ ರೀತಿಯ ಘಟನೆಗಳಿಗೆ ಹಾವುಗಳಿಗೆ ಇರುವ ಯಾವುದೋ ವೈಜ್ಞಾನಿಕ ಕಾರಣ ಅಥವಾ ಬಾಹ್ಯ ಪರಿಸರದ ಪರಿಣಾಮವೇ ಕಾರಣವಾಗಿರಬಹುದು, ಆದರೆ ಇದನ್ನು ಆತ್ಮಹತ್ಯೆ ಎಂದು ಪರಿಗಣಿಸುವುದು ಸರಿಯಾದ ಅರ್ಥವಲ್ಲ.

ಯಾವುದೇ ರೀತಿ ಲೈಂಗಿಕ ಕ್ರಿಯೆ ನಡೆಸದೇ ಸಂತಾನೋತ್ಪತಿ ಮಾಡುತ್ತವೆ ಈ ಪ್ರಾಣಿಗಳು

ಈ ಪೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ , ಹತ್ತು ಹಲವು ಪ್ರಶ್ನೆ ಅನುಮಾನಗಳನ್ನು ಹುಟ್ಟು ಹಾಕಿದೆ. ಪ್ರಾಣಿಗಳು ಮತ್ತು ಹಾವುಗಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಾರಂಭಿಸಿದವು. ಆತ್ಮಹತ್ಯೆ ಸಹಾಯವಾಣೀಗೆ ಕರೆ ಮಾಡುವ ಬದಲು ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

ಹಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡದ ವ್ಯಕ್ತಿಯೊಬ್ಬರು ಅಫಾತಕ್ಕೆ ಒಳಗಾದರು ಮತ್ತುಅದನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

Leave a Comment

Your email address will not be published. Required fields are marked *

Scroll to Top