ಉದ್ಘಾಟನೆಯಾದ ಮೊದಲ ದಿನವೇ ಮಾಲ್ ಲೂಟಿ ಮಾಡಿದ ಪಾಕಿಸ್ತಾನಿಯರು : ವೀಡಿಯೋ ವೈರಲ್‌

ಇಸ್ಲಾಮಾಬಾದ್‌ : ಪಾಕಿಸ್ತಾನ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗುತ್ತಿದೆ . ಹೊಸದಾಗಿ ಉದ್ಧಾಟನೆಯಾದ ” “Dream Bazaar ” ಇಡೀ ಮಾಲ್‌ ಅನ್ನು ಪಾಕಿಸ್ತಾನಿಯರು ಕೆಲವೇ ಗಂಟೆಗಳಲ್ಲಿ ಲೂಟಿ ಮಾಡಿದ್ದಾರೆ.

ಹೌದು .. ಪಾಕಿಸ್ತಾನದ ಕರಾಚಿಯಲ್ಲಿ ʼಡ್ರೀಮ್‌ ಬಜಾರ್‌ ” ಮಾಲ್‌ ಅನ್ನು ಉದ್ಘಾಟನೆಗೊಂಡ ಮೊದಲ ದಿನವೇ ಜನರ ಗುಂಪೊಂದು ಧ್ವಂಸಗೊಳಿಸಿದ್ದು ಮಾತ್ರವಲ್ಲದೇ ಬ್ರಾಂಡೆಡ್‌ ಬಟ್ಟೆಗಳು ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿದೆ. ಈ ಕುರಿತ ವಿಡೀಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್‌ ಆಗುತ್ತಿದೆ.

ಸ್ಪೇಶಲ್‌ ರಿಯಾಯತಿ

“ಕರಾಚಿಯ ಗುಲಿಸ್ತಾನ್‌-ಎ-ಜೋಹರ್‌ ನಲ್ಲಿರುವ ” ಡ್ರೀಮ್‌ ಬಜಾರ್‌ ಮಾಲ್‌ ” ನ ಉದ್ಘಾಟನೆಯ ಪ್ರಯುಕ್ತ ಮಾಲೀಕರು ವಿಶೇಷ ೫೦ ರೂ ರಿಯಾಯತಿ ಘೋಷಿಸಿದ್ದು, ಮೊದಲ ದಿನದಂದು ಪಾಕಿಸ್ತಾನದ ಕರೆನ್ಸಿಯ ೫೦ ರೂ ಗೂ ಕಡಿಮೆ ದರದಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವುದಾಗಿ ಈ ಮಾಲ್‌ ಹೇಳಿಕೊಂಡಿತ್ತು.

ಅದರ ಜೊತೆಗೆ ಜನರನ್ನು ಆಕರ್ಷಿಸಲು ಟಿವಿ, ದಿನ ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತುಗಳಲ್ಲಿ ನೀಡುವ ಮೂಲಕ ಪ್ರಚಾರವನ್ನು ಮಾಡಿದ್ದರು. ಆದರೆ ನಿಗದಿಯಂತೆ ಕಾರ್ಯಕ್ರಮ ನಡೆಯಲಿಲ್ಲ .

ಜನರ ಗುಂಪು ಕಂಡು ಗಾಬರಿಗೊಂಡ ಮಾಲ್‌ ಸಿಬ್ಬಂದಿ, ಅದರ ದ್ವಾರಗಳನ್ನು ಮುಚ್ಚಲು ಪ್ರಯತ್ನಸಿದ್ದಾರೆ. ಆದರೆ ದೊಣ್ಣೆಗಳನ್ನು ಬೀಸುತ್ತಾ ಬಂದ ಕೆಲವರು , ಗಾಜಿನ ಪ್ರವೇಶ ದ್ವಾರವನ್ನು ಹೊಡೆದು ಹಾಕಿದ್ದಾರೆ. ಫಟನಾ ಸ್ಥಳದಲ್ಲಿ ಯಾವುದೇ ರೀತಿ ಪೋಲಿಸರು ಇಲ್ಲದ ಕಾರಣ ಜನರನ್ನು ನಿಯಂತ್ರಿಸಲು ಆಗಲಿಲ್ಲ ಎಂದು ಮಾಲ್‌ ಸಿಬ್ಬಂದಿ ಎಆರ್‌ವೈ ನ್ಯೂಸ್‌ ವರದಿ ಮಾಡಿದೆ.

ಜನರ ಗುಂಪು ತಾವು ವಸ್ತುಗಳನ್ನು ಲೂಟಿ ಮಾಡುತ್ತಿರುವ ದೃಶ್ಯಗಳನ್ನು ವಿಡೀಯೋ ಮಾಡಿಕೊಂಡು ಖುಷಿಪಡುತ್ತಿದ್ದರು. ಈ ಮಾಲ್ ನನ್ನು ವಿದೇಶದಲ್ಲಿರುವ ಉದ್ಯಮಿಯೊಬ್ಬರು ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಿಯಕರನಿಗಾಗಿ ಹೆತ್ತ ಮಗಳನ್ನೇ ಕೊಂದ ತಾಯಿ : ಸೂಟ್‌ ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ.

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಅಕ್ಷರಾ ಅವರು ” ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌” ಶೋ ಬಿಡಲು ಕಾರಣವೇನು

ಮಗುವಿನ ನಾಮಕರಣದ ದಿನವೇ ತಾಯಿ ಹೃದಯಘಾತದಿಂದ ಸಾವು

Scroll to Top