ಮಕ್ಕಳ ಶವವನ್ನು ಹೆಗಲ ಮೇಲೆ ಹೊತ್ತು 15 ಕಿ.ಮೀ ನಡೆದ ತಂದೆ ತಾಯಿ: ಮನಕಲುಕುವ ದೃಶ್ಯ

Highlights : ಅಂಬ್ಯುಲೆನ್ಸ್‌ ಕೊರತೆಯಿಂದಾಗಿ ಗಂಡ-ಹೆಂಡತಿ 15 ಕಿ.ಮೀ. ವರೆಗೆ ತಮ್ಮ ಭುಜದ ಮೇಲೆ ಮಕ್ಕಳ ಮೃತದೇಹಗಳನ್ನು ಹೊತ್ತು ನಡೆಯುತ್ತಿರುವ ಘಡನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಈ ದುಃಖದ ಘಟನೆ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ, ಅಂಬ್ಯುಲೆನ್ಸ್‌ಗಳ ಕೊರತೆಯಿಂದಾಗಿ ದಂಪತಿಗಳು ತಮ್ಮ ಇಬ್ಬರು ಮಕ್ಕಳ ಮೃತದೇಹಗಳನ್ನು ಭುಜದ ಮೇಲೆ ಹೊತ್ತು 15 ಕಿ.ಮೀ. ದೂರ ನಡೆದು ಹೋಗಿದ್ದಾರೆ. ಈ ದುರಂತದ ವಿಡಿಯೋ ವೈರಲ್‌ ಆಗಿದ್ದು, ಎಲ್ಲರ ಮನಸನ್ನು ಕರಗಿಸುತ್ತದೆ.

ಪಟ್ಟಿಗಾಂವ್ ಗ್ರಾಮದಲ್ಲಿ ಸೆಪ್ಟೆಂಬರ್ 4 ರಂದು ಈ ಘಟನೆ ನಡೆದಿದೆ. 6 ಮತ್ತು 3 ವರ್ಷ ವಯಸ್ಸಿನ ಇಬ್ಬರು ಸಹೋದರರು ಜ್ವರದಿಂದ ಅಸ್ವಸ್ಥರಾಗಿದ್ದರು. ಸೂಕ್ತ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ಅವರ ಪೋಷಕರು ಸ್ಥಳೀಯ ಪಂಡಿತರ ಬಳಿಗೆ ಸಾಂಪ್ರದಾಯಿಕ ಚಿಕಿತ್ಸೆಗೆ ಕರೆದೊಯ್ದರು, ಆದರೆ ಮಕ್ಕಳ ಸ್ಥಿತಿಯು ಹದಗೆಟ್ಟಿತು. ಕೆಲವು ಗಂಟೆಗಳಲ್ಲಿ, ಮಕ್ಕಳು ಉಸಿರಾಡಲು ತೊಂದರೆ ಅನುಭವಿಸಿದ್ದು, ಅವರು ಮೃತಪಟ್ಟರು.

ಜಿಮ್ಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆಯಿಲ್ಲದೇ, ಪೋಷಕರು 15 ಕಿ.ಮೀ. ದೂರದಲ್ಲಿ ಇದ್ದ ಆರೋಗ್ಯ ಕೇಂದ್ರವನ್ನು ತಲುಪಲು ಕಷ್ಟಪಟ್ಟು ನಡೆದು ಹೋಗಿದರು, ಆದರೆ ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ್ದಂತೆ ಮಕ್ಕಳು ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು.

ಇದು ಮೊದಲ ಸಮಸ್ಯೆಯಲ್ಲ

ಗಡ್ಡಿರೋಲಿ ಜಿಲ್ಲೆಯಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಬಡ ನಿವಾಸಿಗಳಿಗೆ ಆರೋಗ್ಯ ಸೇವೆಗಳ ದೊಡ್ಡ ಸಮಸ್ಯೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಹಲವಾರು ಪ್ರಕರಣಗಳು ವರದಿಯಾಗಿವೆ. ಭಮ್ರಗಡ್, ಎಟಪಲ್ಲಿ, ಅಹೇರಿ ತಹಸಿಲ್‌ಗಳ ಹಳ್ಳಿಗಳಲ್ಲಿ ರಸ್ತೆ ಸಂಪರ್ಕದ ಕೊರತೆಯಿಂದಾಗಿ ಜನರು ತುರ್ತು ಚಿಕಿತ್ಸೆಗೆ ಅಗತ್ಯವಾದ ಆರೈಕೆ ಪಡೆಯಲು ಪರದಾಡುತ್ತಿದ್ದಾರೆ. ರಸ್ತೆಗಳನ್ನು ಸರಿಯಾಗಿ ನಿರ್ಮಿಸದಿರುವುದರಿಂದ, ಆಂಬ್ಯುಲೆನ್ಸ್ ಸೇವೆಗಳು ಕೂಡಾ ದಟ್ಟ ಪ್ರದೇಶಗಳಲ್ಲಿ ಪ್ರಾಪ್ತವಾಗುವುದಿಲ್ಲ.

ಈ ಕೊರತೆಯಿಂದಾಗಿ ಹಲವಾರು ಕುಟುಂಬಗಳು ಅವಸರದ ಸಮಯದಲ್ಲಿ ನೆರವಿಲ್ಲದೆ ಮಗುವಿನ ಅಥವಾ ಕುಟುಂಬದ ಸದಸ್ಯರ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಜನರು ದಿನನಿತ್ಯದ ಸಮಸ್ಯೆಗಳನ್ನು ಎದುರಿಸುತ್ತಿರುವಂತೆಯೇ, ವೈದ್ಯಕೀಯ ತಜ್ಞರು, ಸಕಾಲಿಕ ಆಂಬ್ಯುಲೆನ್ಸ್ ಸೇವೆಗಳು ಮತ್ತು ಉತ್ತಮ ದಾರಿ ಸಂಪರ್ಕಗಳು ಇಲ್ಲದಿರುವುದು ಆರೋಗ್ಯ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.

ನಾಗರಿಕ ಮೂಲಸೌಕರ್ಯಗಳನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಬೇಡಿಕೆಗಳು ನೀಡಿದ್ದರು ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇನ್ನು ಹೆಚ್ಚು ಅವಘಡಗಳು ನಿಯಮಿತವಾಗಿ ವರದಿಯಾಗುತ್ತಿರುವುದು ಬದಲಾವಣೆಯ ಅಗತ್ಯವನ್ನು ತೋರಿಸುತ್ತದೆ.

ಪ್ರೀತಿ ಮಾಡಿದ್ದಕ್ಕೆ ಮಗಳನ್ನೇ ತುಂಡು ತುಂಡಾಗಿ ಕತ್ತರಿಸಿದ ತಂದೆ
ಪ್ರೀತಿ ಮಾಡಿದ್ದಕ್ಕೆ ಮಗಳನ್ನೇ ತುಂಡು ತುಂಡಾಗಿ ಕತ್ತರಿಸಿದ ತಂದೆ

Follow For More Updates :

Scroll to Top