ಹುಟ್ಟಿ ಒಂದೇ ದಿನದ ಮಗುವನ್ನು ಪೊದೆಯಲ್ಲಿ ಎಸೆದು ಹೋದ ಪಾಪಿಗಳು

ಉತ್ತರಕನ್ನಡ : ಹುಟ್ಟಿ ಒಂದೇ ದಿನ ಕೂಡ ಆಗಿಲ್ಲ ಅಂತಹ ನವಜಾತು ಶಿಶುವನ್ನು ಪೊದೆಯಲ್ಲಿ ಎಸೆದು ಹೋಗಿರುವ ಫಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಿಜಯನಗರದಲ್ಲಿ ನಡೆದಿದೆ.

ನವಜಾತ ಶಿಶುವನ್ನು ಪೊದೆಯಲ್ಲಿ ಎಸೆದು ಹೋಗುವ ಘಟನೆಗಳು ಅತ್ಯಂತ ದುಃಖದ ಮತ್ತು ಸಂಕಟದ ವಿಷಯ. ಈ ರೀತಿಯ ಘಟನೆಗಳು ಸಾಮಾನ್ಯವಾಗಿ ಅನಪೇಕ್ಷಿತ ಗರ್ಭಧಾರಣೆಯ ಅಥವಾ ಸಾಂಸ್ಕೃತಿಕ ಮತ್ತು ಆರ್ಥಿಕ ಸಮಸ್ಯೆಗಳ ಪರಿಣಾಮವಾಗಿ ಸಂಭವಿಸಬಹುದು.

ತಾಯಿಯ ಪ್ರೀತಿಯನ್ನು ಪರಿವರ್ತಿಸಲು ಅಥವಾ ಅದನ್ನು ಅಳೆಯಲು ಸಾಧ್ಯವಿಲ್ಲ, ಏಕೆಂದರೆ ಅದು ಎಲ್ಲಕ್ಕಿಂತ ಮೇಲಿನ ಉತ್ಕೃಷ್ಟ ಪ್ರೀತಿ. ಆದರೆ ಇತ್ತೀಚಿನ ದಿನಗಳಲ್ಲಿ ನವಜಾತು ಶಿಶುಗಳನ್ನು ಕಸದ ಗುಂಡಿಯಲ್ಲಿ ಎಸೆಯುವುದು, ರಸ್ತೆ ಬದಿಯಲ್ಲಿ ಬಿಟ್ಟು ಹೋಗುವುದು ಸಾಮಾನ್ಯವಾಗಿದೆ.

ವಿಜಯನಗರದ ಜೋಪಡಿ ಪರಿಸರದಲ್ಲಿ ನಡೆದ ಈ ಘಟನೆ ಬಹಳವೇ ದುಃಖದ ಸಂಗತಿ. ಟಾಯ್ಲೆಟ್ ಬಳಿ ನವಜಾತ ಶಿಶುವನ್ನು ಬಿಸಾಕಿರುವ ಘಟನೆ ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಳಕಿಗೆ ಬಂದಿದೆ. ಜೋಪಡಿ ನಿವಾಸಿಗಳು, ಆ ಸದ್ದು ಕೇಳಿ ಅದನ್ನು ಪಕ್ಕದ ಮನೆಯವರದ್ದು ಎಂದು ಭಾವಿಸಿ, ಗಮನಹರಿಸಿಲ್ಲ. ಆದರೆ, ಬೆಳಿಗ್ಗೆ ಶೌಚಾಲಯಕ್ಕೆ ಹೋಗುವಾಗ, ಪೊದೆಯಲ್ಲಿ ಮಗು ಬಿಸಾಕಿರುವುದು ಕಂಡುಬಂದಿದೆ.

ಶಿಶುವಿನ ಕುರುಳನ್ನು ಕತ್ತರಿಸಿ, ಪೊದೆಯಲ್ಲಿ ಬಿಸಾಕಿದ್ದಾರೆ. ಸ್ಥಳೀಯರು, ಶಿಶುವು ಹೆಣ್ಣು ಮಗುವು ಇರುವುದು ಅಥವಾ ಅಕ್ರಮ ಸಂಬಂಧದಿಂದ ಹುಟ್ಟಿದ ಮಗು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಪ್ರಾಣಿಗಳಂತಹ ಅಮಾಯಕ ಜೀವಿಗಳ ಮೇಲಿನ ಮಾನವೀಯತೆಯ ನಷ್ಟವನ್ನು ತೋರಿಸುತ್ತದೆ.

ಅದೃಷ್ಟವಶಾತ್‌ ಬೀದಿನಾಯಿಗಳು ಆ ಕಡೆ ಸುಳಿಯಲಿಲ್ಲ ಆದ್ದರಿಂದ ಮಗು ಜೀವಂತವಾಗಿದೆ. ಅಳುತ್ತಿರುವ ಮಗುವನ್ನು ಕಂಡ ಕೂಡಲೇ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಊರಿನ ಜನರೇ ಪೊಲೀಸರಿಗೆ ದೂರು ಕೊಟ್ಟಿದ್ದು, ಆಶಾಕಾರ್ಯಕರ್ತೆಯರು ಹಾಗೂ ಅಧೀಕಾರಿಗಳ ಸಹಾಯದಿಂದ ಮಗುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿರುವ ಕಾರಣ ಮಗು ಅಪಾಯದಿಂದ ಪಾರಾಗಿರುವ ಮಗು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದೆ

ಈ ರೀತಿಯ ಘಟನೆಗಳು ಸಮಾಜದಲ್ಲಿ ಆಳವಾಗಿ ಬೇಧಿಸುತ್ತವೆ, ಮತ್ತು ಅಂತಹ ವಿಚಿತ್ರ ಕೃತ್ಯಗಳನ್ನು ತಡೆಯಲು ಮತ್ತು ನಿರಾಧಾರ ಮಕ್ಕಳಿಗೆ ಸೂಕ್ತ ಆರೈಕೆಯನ್ನು ಒದಗಿಸಲು ಸಮುದಾಯ ಮತ್ತು ಪ್ರಾಧಿಕಾರಗಳು ಕೈಜೋಡಿಸಬೇಕು.

ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಿಹಿ ಸುದ್ದಿ : ಈ ಭಾಗದಲ್ಲಿ ಹೊರಡಲಿದೆ ವಿಶೇಷ ರೈಲು.
ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಸಿಹಿ ಸುದ್ದಿ : ಈ ಭಾಗದಲ್ಲಿ ಹೊರಡಲಿದೆ ವಿಶೇಷ ರೈಲು.
ಟೇರೆಸ್‌ ಮೇಲೆ ಹಾಕಿದ್ದ ಮಹಿಳೆಯರ ಒಳ ಉಡುಪು ಕಳ್ಳತನ ಮಾಡುವ ಕಾಮುಕ ಕಳ್ಳ
ಟೇರೆಸ್‌ ಮೇಲೆ ಹಾಕಿದ್ದ ಮಹಿಳೆಯರ ಒಳ ಉಡುಪು ಕಳ್ಳತನ ಮಾಡುವ ಕಾಮುಕ ಕಳ್ಳ

For More Updates follow our Whatsup channel ; infomate

Scroll to Top