ಲಿವರ್ ದಾನ ಮಾಡಿ ಜೀವ ಉಳಿಸಲು ಹೋಗಿ, ತನ್ನ ಜೀವವೇ ಕಳೆದುಕೊಂಡ ಶಿಕ್ಷಕಿ

ಮಂಗಳೂರು : ಕಾಯಿಲೆ ಪೀಡಿತ ಸಂಬಂಧಿಯೊಬ್ಬರಿಗೆ ಲಿವರ್ ದಾನ ಮಾಡಿದ್ದ ಉಪನ್ಯಾಸಕಿಯೊಬ್ಬರು ಸಾವನಪ್ಪಿದ್ದಾರೆ. ಉಪನ್ಯಾಸಕಿ ಅರ್ಚನಾ ಕಾಮತ್‌ ಲಿವರ್‌ ದಾನ ಮಾಡಿಸಾವನಪ್ಪಿದ್ದಾರೆ .

ಮೃತರನ್ನು ಅರ್ಚನಾ ಕಾಮತ್‌ (34) ಎಂದು ಗುರುತಿಸಲಾಗಿದ್ದು, ಅಂಗಾಂಗ ದಾನ ಮಾಡಲು ಹೋಗಿ ಜೀವ ಕಳೆದುಕೊಡಿದ್ದಾಳೆ.

ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರವನ್ನು ಭಾವಪೂರ್ಣವಾಗಿ ಸ್ವೀಕರಿಸಿದ ಯೂನೆಸ್‌ ಜರೂ

ಅರ್ಚನಾ ಕಾಮತ್‌ ಅವರ ಪತಿ ಚೇತನ್‌ ಕಾಮತ್‌ ಅವರ ತಂದೆಯ ಸಹೋದರ ಪತ್ನಿಗೆ ಲಿವರ್‌ ಸಮಸ್ಯೆ ಇತ್ತು. ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಿವರ್‌ ಕಸಿ ಮಾಡಬೇಕೆಂದು ವೈದ್ಯರು ಹೇಳಿದ್ದರು.

ಹಲವಾರು ಡೋನರ್ ಗಳನ್ನು ಹುಡುಕಲಾಗಿತ್ತು. ಆದ್ರೆ ಅವರ ಬ್ಲಡ್‌ ಗ್ರುಪ್‌ ಮ್ಯಾಚ್‌ ಆಗ್ತಾ ಇರಲಿಲ್ಲ. ಅರ್ಚನಾ ಅವರು ಡೋನೇಟ್‌ ಮಾಡಲು ತೀರ್ಮಾನ ಮಾಡಿದ್ದರು.

೧೨ ದಿನಗಳ ಹಿಂದೆ ಲಿವರ್‌ ಟ್ರಾನ್ಸ್‌ ಪ್ಲಾಂಟ್‌ ಯಶಸ್ವಿಯಾಗಿತ್ತು. ಅರ್ಚನಾ ಅವರು ಕೂಡಾ ಚೇತರಿಸಿಕೊಂಡು ಮೂರು ದಿನಗಳ ಹಿಂದಷ್ಟೇ ಮನೆಗೆ ಮರಳಿದ್ದರು.

ಆದ್ರೆ ಇದ್ದಕ್ಕಿದ್ದಂತೆ ಅರ್ಚನಾ ಅವರು ಅಸ್ವಸ್ಥಗೊಂಡಿದ್ದಾರೆ. ಆದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ. ೧೫ ರಂದು ಅವರು ಮೃತಪಟ್ಟಿದ್ದಾರೆ.

ಸ್ತನ ಕ್ಯಾನ್ಸರ್‌ ಕಾಯಿಲೆಯನ್ನು ಗೆದ್ದ ಚಿತ್ರರಂಗದ ದಿಟ್ಟಿಯರು..

ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಅವರು ಬಳಿಕ ನಗರದ ಬೋದೆಲ್‌ ಬಳಿಯಿರುವ ಮಣೇಲ್‌ ಶ್ರೀನಿವಾಸ ನಾಯಕ್‌ ಎಂಬಿಎ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು.

ಅರ್ಚನಾ ಅವರ ಗಂಡ ಮಂಗಳೂರಿನ ಖ್ಯಾತ ಲೆಕ್ಕಪರಿಶೋಧಕ ಚೇತನ್‌ ಕಾಮತ್.‌ ಅರ್ಚನಾ ಅವರು ನಾಲ್ಕು ವರ್ಷದ ಗಂಡು ಮಗುವನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *

Scroll to Top