ಬಾಕ್ಸಾಫೀಸ್‌ನಲ್ಲಿ ಸೋತರು ಕನ್ನಡಿಗರ ಮನ ಗೆದ್ದ ಅದ್ಭುತ ಸಿನಿಮಾಗಳಿವು !

ಬಾಕ್ಸಾಪೀಸ್‌ನಲ್ಲಿ ವಿಫಲವಾದ ಅದ್ಬುತ್‌ ಕಥೆಯುಳ್ಳ ಚಿತ್ರಗಳನ್ನು “ಮೋಸ್ಟ್‌ ಅಂಡರ್‌ರೇಟೆಡ್‌ ” ಸಿನಿಮಾ ಎನ್ನಲಾಗುತ್ತದೆ. ಇಲ್ಲಿ ಶಿವಣ್ಣನ ಚಿಗುರಿದ ಕನಸಿನಿಂದ ಹಿಡಿದು ಪವರ್ ಸ್ಟಾರ್‌ ಪುನೀತ್‌ ರಾಜ್ ಕುಮಾರ್‌ ಅವರ ಪರಮಾತ್ಮ ಸಿನಿಮಾದವರೆಗೆ ಬಾಕ್ಸಾಪೀಸ್ ನಲ್ಲಿ ಸೋತ ಕನ್ನಡದ ಅದ್ಬುತ ಸಿನಿಮಾಗಳು

ಭೂಮಿತಾಯಿಯ ಚೊಚ್ಚಲ ಮಗ

೧೯೯೮ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಹ್ಯಾಟ್ರಿಕ್‌ ಶಿವರಾಜ್ ಕುಮಾರ್‌ ಮತ್ತು ರಮೇಶ್‌ ಅರವಿಂದ್‌ ಲೀಡ್‌ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ದ.ರಾ.ಬೇಂದ್ರೆ ಅವರ ಕಣ್ತೆರದೊಮ್ಮೆ ನೋಡಿಹಿರೇನು ? ಎಂಬ ಸಾಹಿತ್ಯದ ಆಧಾರಿತ ಈ ಚಿತ್ರವನ್ನು ರಾಜೇಂದ್ರ ಬಾಬು ಸಿಂಗ್‌ ಬಾಬು ನಿರ್ದೇಶನ ಮಾಡಿದ್ದರು. ಈ ಸಿನಿಮಾಗೆ ಸ್ಟೇಟ್‌ ಅವಾರ್ಡ ಕೂಡ ಬಂದಿದ್ದು, ಇಂದಿಗೂ ಈ ಸಿನಿಮಾ ಜನರು ಯೂಟ್ಯೂಬ್ ನಲ್ಲಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಉಳಿದವರು ಕಂಡಂತೆ

೨೦೧೪ ರಲ್ಲಿ ತೆರೆಕಂಡ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ “ಉಳಿದವರು ಕಂಡಂತೆ ” ಸಿನಿಮಾ ಬಾಕ್ಸ್‌ ಆಫೀಸ್ ನಲ್ಲಿ ಗೆಲ್ಲಲಿಲ್ಲ. ಆದರೆ ಈಗ ಈ ಸಿನಿಮಾ ನೋಡಿದವರು ಒಳ್ಳೆ ಸಿನಿಮಾ ಫೇಲ್‌ ಆಗುವಂತಹ ಚಿತ್ರವಲ್ಲ ಅಂತಾರೆ. ರಕ್ಷತ್‌ ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ನಟಿಸಿರುವ ಚಿತ್ರ.

ಬಾಕ್ಸಾಫೀಸ್‌ನಲ್ಲಿ ಸೋತ ಕನ್ನಡದ ಅದ್ಭುತ ಸಿನಿಮಾಗಳಿವು !
ಚಿಗುರಿದ ಕನಸು

೨೦೦೩ ರಲ್ಲಿ ಟಿ.ಎಸ್‌ . ನಾಗಾಭರಣ್‌ ನಿರ್ದೇಶನದಲ್ಲಿ ಮೂಡಿಬಂದ “ಚಿಗುರಿದ ಕನಸು” ಎಲ್ಲರೂ ನೋಡಲೇಬೇಕಾದಂತಹ ಒಂದು ಒಳ್ಳೇ ಸಿನಿಮಾ. ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್‌ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರ ಶಿವರಾಮ ಕಾರಂತರ ಇದೇ ಹೆಸರಿನ ಕಾದಂಬರಿ ಆಧಾರಿತವಾಗಿತ್ತು.

ಬಾಕ್ಸಾಫೀಸ್‌ನಲ್ಲಿ ಸೋತ ಕನ್ನಡದ ಅದ್ಭುತ ಸಿನಿಮಾಗಳಿವು !
ಪರಮಾತ್ಮ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ನಾಯಕರಾಗಿ ಅಭಿನಯಿಸಿದ್ದ ಈ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಪ್ರೇಕ್ಷಕರಿಗೆ ಹಿಡಿಸಿರಲಿಲ್ಲ. ಆದರೆ ಕ್ರಮೇಣ ಒಳ್ಳೆಯ ಅರ್ಥ ಹೇಳುವ ಈ ಸಿನಿಮಾ ಹಲವರ ಫೆವರಿಟ್‌ ಹಾಗೇ ಅದರಲ್ಲಿ ಬರುವ ಪ್ರತಿಯೊಂದು ಹಾಡುಗಳು ಕೂಡ ಸಖತ್‌ ಹಿಟ್‌ ಆಗಿದ್ದವು.

ಬಾಕ್ಸಾಫೀಸ್‌ನಲ್ಲಿ ಸೋತ ಕನ್ನಡದ ಅದ್ಭುತ ಸಿನಿಮಾಗಳಿವು !
ಜಟ್ಟ

ಕಿಶೋರ್‌ ನಟಿಸಿರುವ ಹಾಗೂ ಗಿರಿರಾಜ್‌ ಅವರಂತಹ ಪ್ರಯೋಗಶೀಲ ನಿರ್ದೇಶಕರ ಕಾಂಬಿನೇಷನ್‌ ನಲ್ಲಿ ಮೂಡಿಬಂದ “ಜಟ್ಟ” ಒಂದು ಅದ್ಭುತ ಸಿನಿಮಾ. ಚಿತ್ರದಲ್ಲಿ ಕಿಶೋರ್‌ ಅವರು ಫಾರೆಸ್ಟ್‌ ಗಾರ್ಡ ಪಾತ್ರದಲ್ಲಿ ನಟಿಸಿದ್ದು ಕಾಡಿನಲ್ಲಿ ಸೌಂದರ್ಯ, ಸಂಘರ್ಷ, ಹೆಣ್ಣಿನ ಕೂಗು, ಗಂಡಿನ ಮೌನ, ಇಂದೊಂದು ಕಾಡುವಂತ ಸಿನಿಮಾವಾಗಿದೆ.

ಗೊಂಬೆಗಳ ಲವ್‌

ಗೊಂಬೆಗಳ ಲವ್‌ ಸಿನಿಮಾದ ನೋಡಿದ ಹಲವರು ನಿರ್ದೇಶಕ ಸಂತೋಷ್‌ ಕೆ ನಾಯರ್‌ ಅವರಿಗೆ ನಿನ್ನ ಟ್ಯಾಲೆಂಟ್‌ ಹಾಳುಮಾಡಿಕೊಳ್ಳಬೇಡ, ತಮಿಳು ಇಂಡಸ್ತ್ರಿಗೆ ಹೋಗು ಅಂದಿದ್ದರಂತೆ. ಯಾಕೆಂದರೆ , ಈ ಸಿನಿಮಾ ಸೋತಿದ್ದರಿಂದ ಬೇಜಾರಾಗಿ ಈ ಮಾತನ್ನು ಹೇಳಿದ್ದರಂತೆ. ಅರುಣ್‌ ನಾಯಕನಾಗಿ ಹಾಗೂ ಪವನಾ ನಾಯಕನಾಗಿ ನಟಿಸಿದ್ದ ಈ ಚಿತ್ರ ಅದ್ಭುತ ಕಥೆ ಹೊಂದಿತ್ತು.

ಜಸ್ಟ್‌ ಮಾತ್‌ ಮಾತಲ್ಲಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಿರ್ದೇಶಿಸಿ, ನಟಿಸಿರುವ “ಜಸ್ಟ್‌ ಮಾತ್‌ ಮಾತಲ್ಲಿ” ಸಿನಿಮಾ ಹಲವರಿಗೆ ಇಷ್ಟವಾಗಿರಲಿಲ್ಲ. ಆದರೆ ಸಿನಿಮಾದಲ್ಲಿ ರಘು ದೀಕ್ಷಿತ್‌ ಅವರ ದ್ವನಿಯಲ್ಲಿ ಮೂಡಿಬಂದ ಸಾಂಗ್‌ ಗಳು ಮಾತ್ರ ಸೂಪರ್‌ ಹಿಟ್‌ ಆಗಿದ್ದವು.

ಹೆಚ್ಚಿನ ಮಾಹಿತಿಗಾಗಿ ನಮ್ಮ ಖಾತೆಯನ್ನು ಫೋಲೋ ಮಾಡಿ

Scroll to Top