ಶುಗರ್ ಕಂಟ್ರೋಲ್ ನಲ್ಲಿಡಲು ಈ ಆಹಾರ ಪದಾರ್ಥಗಳೇ ಸಾಕು: ಮಾತ್ರೆಗಳಿಲ್ಲದೆ ಮುಕ್ತಿ

Sugar Control : ಜೀವನಶೈಲಿಯಿಂದಾಗಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ರೋಗವು ದೇಹಕ್ಕೆ ಹಾನಿ ಮಾಡುತ್ತದೆ. ಅನೇಕ ಇತರ ಕಾಯಿಲೆಗಳಿಗೆ ಸಕ್ಕರೆ ಕಾಯಿಲೆ ದಾರಿ ಮಾಡಿಕೊಡುತ್ತದೆ. ಇದನ್ನು ತಪ್ಪಿಸಲು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರಬೇಕು.

ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜನ ಹಲವಾರು ರೀತಿಯ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ದೀರ್ಘಕಾಲದವರೆಗೆ ಔಷಧಿಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕೆಲವು ಸರಳ ಮಸಾಲೆಗಳನ್ನು ಬಳಸುವುದರ ಮೂಲಕ ನೀವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಬಹುದು.

ದಾಲ್ಚಿನ್ನಿ ಅಥವಾ ಚಕ್ಕೆ: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನೀವು ದಾಲ್ಚಿನ್ನಿ ಸಹಾಯವನ್ನು ತೆಗೆದುಕೊಳ್ಳಬಹುದು. ದಾಲ್ಚಿನ್ನಿ ನಿರ್ದಿಷ್ಟವಾಗಿ ಪಾಲಿಫಿನಾಲ್ ಗಳನ್ನು ಹೊಂದಿರುತ್ತದೆ, ಇದು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಾಲ್ಚಿನ್ನಿಯನ್ನು ಆಹಾರದಲ್ಲಿ ಸೇರಿಸುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಶುಂಠಿ: ಇದರಲ್ಲಿ ಉತ್ಕರ್ಷಣ ವಿರೋಧಕ ಗುಣಗಳಿದ್ದು ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಲ್ಲಿ ಇನ್ಸುಲಿನ್ ಬಳಕೆಯನ್ನು ಹೆಚ್ಚಿಸುವ ಗ್ರಾಹಕಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಅರಿಶಿನ: ರಕ್ತದಲ್ಲಿನ ಸಕ್ಕರೆ ಮಟವನ್ನು ನಿಯಂತ್ರಿಸುವಲ್ಲಿ ಅರಿಶಿನವು ಉತ್ತಮ ಪಾತ್ರವನ್ನು ವಹಿಸುತ್ತದೆ. ಅರಿಶಿನದಲ್ಲಿ ಕೆಲವು ಅಂಶಗಳಿದ್ದು ಅದು ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೆಂತ್ಯೆ: ಮೆಂತ್ಯೆ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವುಗಳಲ್ಲಿ ಫೈಬರ್, ಪ್ರೋಟೀನ್, ಮೆಗ್ನೀಷಿಯಮ್ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕಾರಿ.

ಲವಂಗ: ಲವಂಗದಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ವಿಟಮಿನ್ ಎ ಮತ್ತು ಸಿ ಆರೋಗ್ಯವಾಗಿಡುತ್ತವೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಅಂಶವಿದ್ದು ಇದು ಇನ್ಸುಲಿನ್ ಅನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟವನ್ನು ಕಡಿಮೆ ಮಾಡಲು ಮಾಡುವ ಕೆಲಸವನ್ನು ಮಾಡುತ್ತದೆ.

Follow For More Updates

Scroll to Top