ಮದುವೆ ಮುನ್ನ ಮಗನಿದ್ದರೂ ಇನ್ನೊಂದು ಮದುವೆಯಾದ ನಟಿ.

Amy Jackson :ಆಮಿ ವಧು ಧರಿಸುವ ಗೌನ್‌ನಲ್ಲಿ ಮಿಂಚಿದ್ದಾರೆ. ಸೊಗಸಾದ ಬಿಳಿ ಮತ್ತು ಕಪ್ಪು ಟಕ್ಸೆಡೋ ಧರಿಸಿದ ಎಡ್‌ ಭಾವಿ ಪತ್ನಿಗಾಗಿ ಕಾಯುತ್ತಿದ್ದಳು. ” ಪ್ರಯಾಣ ಈಗಷ್ಟೇ ಪ್ರಾರಂಭವಾಗಿದೆ ” ಎಂದು ತಮ್ಮ ಮದುವೆ ಪೋಟೋಗಳಿಗೆ ಶೀರ್ಷಿಕೆ ಕೊಟ್ಟಿದ್ದಾರೆ.

ಆಮಿ ಜಾಕ್ಸನ್‌ ಪ್ರಿಯತಮ ಎಡ್‌ ವೆಸ್ಟ್ವಕ್‌ ಅವರನ್ನು ವಿವಾಹವಾದರು. ಇಟಲಿಯ ಅಮಲ್ಪಿ ಕರಾವಳಿಯಲ್ಲಿ ಐಷಾರಾಮಿ ನೌಕೆಯಲ್ಲಿ ನಡೆದ ಪಾರ್ಟಿಯಲ್ಲಿ ದಂಪತಿ ತಮ್ಮ ವಿವಾಹ ಆಚರಣೆಗಳನ್ನು ನಡೆಸಿದರು. ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬವು ಮದುವೆಯ ಭಾಗವಾಗಿದ್ದರು . ವಿವಾಹಪೂರ್ವ ಚಿತ್ರಗಳನ್ನು ತಮ್ಮ ಆನಲೈನ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

2014, ಮೇ 5 ರಂದು ಅಧಿಕೃತವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಂಡಿರುವ ಆಮಿ ಮಾರ್ಚ ತಿಂಗಳಿನಲ್ಲಿ ಮದುವೆ ಮುನ್ನ ಗರ್ಭಿಣಿಯಾಗಿರುವುದನ್ನು ಹೇಳಿಕೊಂಡಿದ್ದರು. ಅವರ ಮಗನ ಜನನದ ನಂತರ ಇಬ್ಬರು 2021 ರಲ್ಲಿ ಬೇರ್ಪಟ್ಟರು. ಇದರಿಂದ ಆಮಿ ಜಾಕ್ಸನ್‌ ಸಾಕಷ್ಟು ಟ್ರೋಲ್‌ ಗಳಿಗೆ ಒಳಗಾಗಿದ್ದರು. ನಂತರ 2022 ರಲ್ಲಿ ಇಂಗ್ಲೀಷ್‌ ನಟ ಎಡ್‌ ವೆಸ್ಟವಿಕ್‌ ಅವರೊಂದಿಗೆ ಡೇಟಿಂಗ್‌ ಮಾಡಲು ಪ್ರಾರಂಭಿಸಿದರು.

ಆಗಸ್ಟ 23 2024 ರಂದು ತಮ್ಮ ಪ್ರಿಯತಮನ ಜೊತೆ ವಿವಾಹವಾಗಿದ್ದು, ಮಗನ ಜೊತೆಯಲ್ಲಿ ಮದುವೆಯಾಗಿರುವುದರಿಂದ ನೆಟ್ಟಿಗರು ನೀನು ತುಂಬಾ ಲಕ್ಕಿ ನಿಮ್ಮ ಅಮ್ಮನ ಮದುವೆಯನ್ನು ನೋಡುತ್ತಿದ್ಯಾ , ಇನ್ನು ಕೆಲವರು ಆಮಿ ಅವರ ಲುಕ್‌ ಯನ್ನು ಹೊಗಳಿದ್ದಾರೆ.

2010 ರಲ್ಲಿ ತಮಿಳು ನಿರ್ದೇಶಕ ಎ.ಎಲ್.‌ ವಿಜಯ್‌ ಇವರನ್ನು ತಮ್ಮ “ಮದ್ರಾಸಿಪಟ್ಟಣಂ ” ಸಿನಿಮಾದ ನಾಯಕಿಯಾಗಿ ಆಯ್ಕೆಮಾಡುವ ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದರು. ನಂತರ ಇವರು ಹಿಂದಿ ಮತ್ತು ತೆಲಗು ಚಿತ್ರರಂಗದಲ್ಲಿ ಕೂಡ ಸಕ್ರಿಯವಾದರು. ಅಮೇರಿಕಾದ ಕಿರುತೆರೆವಾಹಿನಿ ದಿ ಸಿಡಬ್ಲೂನ ” ಸೂಪರಗರ್ಲ ” ಸಿರೀಸ್ ನಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಕನ್ನಡದಲ್ಲಿ ಪ್ರೇಮ್‌ ನಿರ್ದೇಶನದ ” ದಿ ವಿಲನ್‌ ʼ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಚಿತ್ರಗಳಲ್ಲಿನ ನಟನೆಗಾಗಿ ಕೆಲಕಾಲ ಮುಂಬೈನಲ್ಲಿ ನೆಲೆಸಿದ್ದ ಆಮಿ ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದಾನಗಳನ್ನು ಮಾಡಿದ್ದಾರೆ.

Scroll to Top