ಹಿರಿಯ ನಟಿ ಪದ್ಮಜಾ ರಾವ್‌ 3 ತಿಂಗಳು ಜೈಲು ಶಿಕ್ಷೆ, ಕಾರಣ ಇದೇ ನೋಡಿ

ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿ ಪದ್ಮಜಾ ರಾವ್‌ ಅವರಿಗೆ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ 3 ತಿಂಗಳು ಜೈಲು ಶಿಕ್ಷೆ ಮತ್ತು ೪೦ ಲಕ್ಷ ರೂ . ದಂಡ ವಿಧಿಸಲಾಗಿದೆ.

ವೀರೂ ಟಾಕೀಸ್ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಬಳಿ ಪದ್ಮಜಾ ರಾವ್‌ ಅವರು 40 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಭದ್ರತೆ ದೃಷ್ಠಿಯಿಂದ ಪದ್ಮಜಾ ರಾವ್‌ ಚೆಕ್‌ ನೀಡಿದ್ದರು. ಇದು ನಡೆದಿದ್ದು 2020ರ ಜೂನ್‌ 17 ರಂದು , ಆದರೆ, ಪದ್ಮಜಾ ಅವರು ಹಣ ಪಾವತಿ ಮಾಡಿಲ್ಲ.

ಮಂಗಳೂರಿನ ವೀರೇಂದ್ರ ಶೆಟ್ಟಿ ಬಳಿ 40 ಲಕ್ಷ ರೂ . ಸಾಲ ಪಡೆದಿದ್ದ ಪದ್ಮಜಾ ರಾವ್‌ ನೀಡಿದ್ದ ಚೆಕ್‌ ಬೌನ್ಸ್‌ ಆಗಿತ್ತು.

ಆದರೆ ಸಾಲ ಮರುಪಾವತಿಯೂ ಮಾಡದೇ ವಂಚಿಸಿದ್ದರು. ಈ ಪ್ರಕರಣ ಹಿನ್ನಲೆಯಲ್ಲಿ ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯ ಸುದೀರ್ಘ ವಿಚಾರಣೆ ನಂತರ 3 ತಿಂಗಳು ಜೈಲು ಶಿಕ್ಷೆ ಪ್ರಕಟಿಸಿದೆ.

ವಿರೇಂದ್ರ ಶೆಟ್ಟಿ ಅವರು ನ್ಯಾಯಲಯದ ಮೊರೆ ಹೋಗಿದ್ದರು. ಈ ಮೊದಲು ವಿಚಾರಣೆಗೆ ಹಾಜರಾದ ಪದ್ಮಜಾ ರಾವ್‌ ಅವರು ಬೇರೆಯದ ರೀತಿಯ ಹೇಳಿಕೆ ನೀಡಿದ್ದರು. “ನಾನು ಸಾಲವನ್ನು ಪಡೆದಿಲ್ಲ ಚೆಕ್‌ ಕದ್ದು ಸಹಿ ನಕಲು ಮಾಡಿದ ಆರೋಪವನ್ನು ಪದ್ಮಜಾ ರಾವ್‌ ಮಾಡಿದ್ದರು. ಆದರೆ ಇದಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಒದಗಿಸಲು ವಿಫಲರಾಗಿದ್ದರು.

ಪದ್ಮಜಾ ಅವರು 40.20 ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಿದೆ. ಇದರಲ್ಲಿ 40.17 ಲಕ್ಷ ರೂಪಾಯಿ ಹಣವನ್ನು ದೂರುದಾರನಿಗೆ ಕೊಡಬೇಕಿದೆ. ಉಳಿದ 3 ಸಾವಿರ ರೂಪಾಯಿ ಹಣವನ್ನು ಸರ್ಕಾರಕ್ಕೆ ತುಂಬಬೇಕು. ಇನ್ನು 3 ತಿಂಗಳು ಕಾರಾಗೃಹ ಶಿಕ್ಷೆ ಅನುಭವಿಸಬೇಕಿದೆ.

ಪದ್ಮಜಾ ರಾವ್‌ ಅವರು ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮುಂಗಾರು ಮಳೆ ಸೇರಿದಂತೆ ಹಲವಾರು ಸೂಪರ್‌ ಹಿಟ್‌ ಚಲನಚಿತ್ರಗಳಲ್ಲಿ ಪೋಷಕ ಪಾತ್ರ ಮಾಡಿದ್ದಾರೆ.

Scroll to Top